ರಷ್ಯಾಗೆ ಹೆದರಿತಾ ಅಮೆರಿಕ? UNSCಯಲ್ಲಿ ಇದೆಂಥಾ ಕೆಲಸ!

masthmagaa.com:

ಯುಕ್ರೇನ್‌ ನಲ್ಲಿ ರಷ್ಯಾ ಮಾನವೀಯತೆಯ ಕಗ್ಗೊಲೆ ಮಾಡ್ತಿದೆ ಅನ್ನೋ ಆರೋಪಕ್ಕೆ ಸಂಬಂಧ ಪಟ್ಟಹಾಗೆ ರಷ್ಯಾ ಕರೆದಿದ್ದ ಭದ್ರತಾ ಮಂಡಳಿಯ ಸಭೆಗೆ 15 ರಾಷ್ಟ್ರಗಳ ಪೈಕಿ13 ರಾಷ್ಟ್ರಗಳು ಗೈರಾಗಿವೆ, ಇನ್ನುಳಿದಂತೆ ರಷ್ಯಾ ಚೀನಾ ಎರಡು ರಾಷ್ಟ್ರಗಳು ನಿರ್ಣಯದ ಪರವಾಗಿ ಮತ ಹಾಕಿವೆ. ಆ ಮೂಲಕ ಅಗತ್ಯವಿದ್ದ 9 ಮತಗಳನ್ನ ಪಡೆಯೋಕೆ ಸಾದ್ಯವಾಗ್ದೇ ರಷ್ಯಾ ತನ್ನ ಪರವಾದ ನಿರ್ಣಯ ಪಡೆಯೋದ್ರಲ್ಲಿ ಫೇಲ್‌ ಆಗಿದೆ. ಆದ್ರೆ ಅದಕ್ಕಿಂತ ಕುತೂಹಲಕಾರಿ ವಿಚಾರ ಏನ್‌ ಅಂದ್ರೆ ರಷ್ಯಾ ವಿರುದ್ದ ಅಮೆರಿಕಾ ಸೇರಿದಂತೆ ಯಾವೊಂದೂ ರಾಷ್ಟ್ರಗಳು ಕೂಡ ಮತಹಾಕಿಲ್ಲ ಅನ್ನೋದು. ಅಂದ್ರೆ ರಷ್ಯಾ ವಿರುದ್ದ ದಿನ ಬೆಳಗಾದ್ರೆ ಬೆಂಕಿಯುಗುಳ್ತಿರುವ ಸೋ ಕಾಲ್ಡ್‌ ವಿಶ್ವದ ದೊಡ್ಡಣ್ಣ ಅಮೆರಿಕಾ ಕೂಡ ತನ್ನ ಶತ್ರು ವಿರುದ್ದ ಮತ ಹಾಕೋದ್ರಿಂದ ಹಿಂದೆ ಸರಿದಿದೆ,ಆಬ್ಸೆನ್ಸ್‌ ಆಗಿದೆ. ಇದು ಎಲ್ಲೋ ಒಂದ್ಕಡೆ ರಷ್ಯಾ ವಿಶ್ವಸಂಸ್ಥೆಯಲ್ಲೂ ಕೂಡ ತನ್ನ ಪ್ರಭಾವ ಬೀರ್ತಾಯಿದ್ಯಾ ಅನ್ನೋ ದಟ್ಟ ಅನುಮಾನಕ್ಕೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply