ʻಮಾನವ ಹಕ್ಕುಗಳ ಬೋಧನೆ ನಿಲ್ಸಿʼ: ಪಾಕ್‌ಗೆ ಭಾರತ ಮಂಗಳಾರತಿ!

masthmagaa.com:

ಕಾಶ್ಮೀರದ ವಿಚಾರವಾಗಿ ಸದಾ ಕಾಲ್ಕೆರ್ಕೊಂಡು ಬರೋ ಪಾಕ್‌ ಭಾರತದಿಂದ ಅದೆಷ್ಟೇ ಬಾರಿ ಮಂಗಳಾರತಿ ಮಾಡಿಸ್ಕೊಂಡ್ರು ಬುದ್ದಿ ಬರೋ ಹಾಗೆ ಕಾಣ್ತಿಲ್ಲ. ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ನಡೆದ ಇಂಟರ್‌-ಪಾರ್ಲಿಮೆಂಟರಿ ಯುನಿಯನ್‌ನ (IPU) 148ನೇ ಅಧಿವೇಶನದಲ್ಲಿ ಕಾಶ್ಮೀರ, ಲಡಾಖ್‌ ಬಗ್ಗೆ ಕಮೆಂಟ್‌ ಮಾಡಿರೋ ಪಾಕ್‌ಗೆ ಭಾರತ ತಕ್ಕ ಉತ್ತರ ನೀಡಿದೆ. ʻಮಾನವ ಹಕ್ಕುಗಳ ಬಗ್ಗೆ ಬೋಧನೆ ಕೊಡೋದು ನಿಲ್ಸಿ. ಮೊದಲು ನಿಮ್ಮ ಉಗ್ರರ ಫ್ಯಾಕ್ಟರಿಯನ್ನ ನಿಲ್ಲಿಸೋ ಬಗ್ಗೆ ಫೋಕಸ್‌ ಮಾಡಿʼ ಅಂತ ಹೇಳಿದೆ. ಎಸ್‌…. ಭಾರತದ ರಾಜ್ಯಸಭೆಯ ಉಪಾಧ್ಯಕ್ಷರಾದ ಹರಿವಂಶ ನಾರಾಯಣ ಸಿಂಗ್‌ ಈ ರೀತಿ ಸ್ಟೇಟ್‌ಮೆಂಟ್‌ ನೀಡಿದ್ದಾರೆ. ʻಉಗ್ರರಿಗೆ ಆಶ್ರಯ, ನೆರವು ಮತ್ತು ಬೆಂಬಲ ನೀಡಿರೋ ಹಿಸ್ಟರಿ ಹೊಂದಿರೋ ದೇಶ ಮಾನವ ಹಕ್ಕುಗಳ ಬಗ್ಗೆ ಕಮೆಂಟ್‌ ಮಾಡ್ಬಾರ್ದು. ಜಮ್ಮು & ಕಾಶ್ಮೀರ ಹಾಗೂ ಲಡಾಖ್‌ ಈ ಹಿಂದೆ ಮತ್ತು ಇನ್ಮುಂದೇನೂ ಭಾರತದ ಅವಿಭಾಜ್ಯ ಅಂಗವಾಗಿ ಉಳಿಯಲಿದೆʼ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply