ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ನಾರಿಯರ ಅಬ್ಬರ

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ-20 ಕದನದಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ 11 ರನ್‍ಗಳ ರೋಚಕ ಗೆಲುವು ದಾಖಲಿಸಿದೆ. ಸೂರತ್‍ನಲ್ಲಿರೋ ಲಾಲ್‍ಬಾಯಿ ಕಾಂಟ್ರಾಕ್ಟರ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 8 ವಿಕೆಟ್ ನಷ್ಟಕ್ಕೆ 130 ರನ್ ಗಳಿಸಿತ್ತು. ಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಪ್ರಿಕಾ ಭಾರತೀಯ ಬೌಲರ್‍ಗಳ ದಾಳಿಗೆ ತುತ್ತಾಯ್ತು. ಅಂತಿಮವಾಗಿ 19.5 ಓವರ್‍ಗಳಲ್ಲಿ 119 ರನ್‍ಗಳಿಗೆ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು ಭಾರತದ ಮುಂದೆ ಶರಣಾಯ್ತು. ಭಾರತದ ಪರ ದೀಪ್ತಿ ಶರ್ಮಾ 4 ಓವರ್‍ನಲ್ಲಿ 8 ರನ್ ಮಾತ್ರ ನೀಡಿ 3 ವಿಕೆಟ್‍ಗಳನ್ನು ಬೀಳಿಸಿ ಮಿಂಚಿದ್ರು. ಈ ಮೂಲಕ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ಸಾಧಿಸಿದೆ.

Contact Us for Advertisement

Leave a Reply