WTC ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೇರಿದ ಟೀಮ್‌ ಇಂಡಿಯಾ!

masthmagaa.com:

WTC ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೇರಿದ ಟೀಮ್‌ ಇಂಡಿಯಾ!

ಇಂಗ್ಲೆಂಡ್‌ ವಿರುದ್ದ 2ನೇ ಟೆಸ್ಟ್‌ನಲ್ಲಿ ಗೆಲುವಿನ ಬಳಿಕ ಟೀಮ್‌ ಇಂಡಿಯಾ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ರ‍್ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೇರಿದೆ. ಈ ಹಿಂದೆ ಆರನೇ ಸ್ಥಾನದಲ್ಲಿದ್ದ ಭಾರತ ಎರಡನೇ ಟೆಸ್ಟ್‌ ಗೆಲುವಿನ ನಂತ್ರ 55 ಪರ್ಸೆಂಟೇಜ್ ಪಾಯಿಂಟ್ಸ್‌ನೊಂದಿಗೆ WTC ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಎರಡನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಇನ್ನೊಂದೆಡೆ ಆಂಗ್ಲರ ವಿರುದ್ದದ ಟೆಸ್ಟ್‌ನಲ್ಲಿ ಭಾರತದ ಯುವ ಕ್ರಿಕೆಟಿಗರು ಉತ್ತಮ ಪ್ರದರ್ಶನ ನೀಡಿರೋದಕ್ಕೆ ಟೀಮ್‌ನ ಕೋಚ್‌ ರಾಹುಲ್‌ ದ್ರಾವಿಡ್‌ ಸಂತಸ ವ್ಯಕ್ತ ಪಡಿಸಿದ್ದಾರೆ. ಅಂದ್ಹಾಗೆ ಈ ಟೆಸ್ಟ್‌ನಲ್ಲಿ ಯುವ ಕ್ರಿಕೆಟಿಗ ಯಶಸ್ವಿ ಜಸ್ವಾಲ್‌ ದ್ವಿಶತಕ ಹಾಗೂ ಶುಭಮನ್‌ ಗಿಲ್‌ ಶತಕ ಬಾರಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ರು.

-masthmagaa.com

Contact Us for Advertisement

Leave a Reply