ಇಂಗ್ಲೆಂಡ್​ ಪ್ರವಾಸದಲ್ಲಿರೋ ಭಾರತೀಯ ಕ್ರಿಕೆಟಿಗರಿಗೆ ಕೊರೋನಾ!

masthmagaa.com:

ಐದು ಪಂದ್ಯಗಳ ಟೆಸ್ಟ್​ ಸರಣಿಗಾಗಿ ಇಂಗ್ಲೆಂಡ್ ಪ್ರವಾಸದಲ್ಲಿರೋ ಟೀಂ ಇಂಡಿಯಾ ಆಟಗಾರರಿಗೆ ಕೊರೋನಾ ಬಂದಿದೆ. ಮೊದಲು ರಿಷಬ್ ಪಂಥ್​​ಗೆ ಬಂದಿದ್ದ ಮಹಾಮಾರಿ ಈಗ ತಂಡದ ಮತ್ತೋರ್ವ ಸಿಬ್ಬಂದಿ ದಯಾನಂದ ಗರನಿಗೂ ಬಂದಿದೆ. ಇವರಲ್ಲದೇ ವೃದ್ಧಿಮಾನ ಸಾಹಾ ಮತ್ತು ಮೂವರು ಕೋಚಿಂಗ್ ಅಸಿಸ್ಟೆಂಟ್​​ಗಳನ್ನು ಕೂಡ ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ ಡರ್ಹಾನ್​ನಲ್ಲಿ ನಡೆಯಲಿರೋ ಅಭ್ಯಾಸ ಪಂದ್ಯಕ್ಕೆ ಈ ಸಿಬ್ಬಂದಿ ಹೋಗೋದಿಲ್ಲ ಅನ್ನೋ ಮಾಹಿತಿ ಕೂಡ ಲಭ್ಯವಾಗಿದೆ. ಅಂದಹಾಗೆ ಆಗಸ್ಟ್​ 4ರಿಂದ ಟೆಸ್ಟ್​ ಸರಣಿ ಆರಂಭವಾಗಲಿದೆ. ವಿಕೆಟ್ ಕೀಪರ್ ಆಗಿರೋ ರಿಷಬ್ ಪಂಥ್​​ ನಾಡಿದ್ದು ಭಾನುವಾರ ನೆಗೆಟಿವ್ ವರದಿ ಬಂದ್ರೆ ಮಾತ್ರವೇ ಕ್ವಾರಂಟೈನ್​​ನಿಂದ ಹೊರಬಂದು ತಂಡವನ್ನು ಸೇರಿಸಿಕೊಳ್ಳಲು ಸಾಧ್ಯವಾಗುತ್ತೆ.

-masthmagaa.com

Contact Us for Advertisement

Leave a Reply