ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ದೊಡ್ಡ ಗೆಲುವು: ಸಮೀಕ್ಷೆ

masthmagaa.com:

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 400 ಸೀಟ್‌ಗಳ ಟಾರ್ಗೆಟ್‌ ಹೊಂದಿರೋ ಮೋದಿ ನೇತೃತ್ವದ ಬಿಜೆಪಿ ಪಕ್ಷ ಭರ್ಜರಿ ಗೆಲುವು ಸಾಧಿಸಲಿದೆ ಅಂತ ಹೊಸ ಸರ್ವೇಯೊಂದು ಹೇಳಿದೆ. ಈ ಬಾರಿ ಎಲೆಕ್ಷನ್‌ನಲ್ಲಿ ಬಿಜೆಪಿ ಪಕ್ಷ ಬರೋಬ್ಬರಿ ಮುಕ್ಕಾಲು ಭಾಗದಷ್ಟು ಸಂಸದೀಯ ಸ್ಥಾನಗಳನ್ನ ಗೆಲ್ಲಲಿದೆ. ಹಾಗೂ ವಿಪಕ್ಷ ಕಾಂಗ್ರೆಸ್‌ ಹೀನಾಯವಾಗಿ ಸೋಲಲಿದೆ ಅಂತ India TV-CNX ಒಪಿನಿಯನ್‌ ಪೋಲ್‌ ಪಬ್ಲಿಷ್‌ ಮಾಡಿದೆ. ಇದ್ರ ಪ್ರಕಾರ… 543 ಸೀಟ್‌ಗಳ ಪೈಕಿ ಮೋದಿಯವ್ರ ಎನ್‌ಡಿಎ ಮೈತ್ರಿಕೂಟಕ್ಕೆ 399 ಸೀಟ್‌ಗಳು ವರವಾಗೋ ಸಾಧ್ಯತೆಯಿದೆ ಎನ್ನಲಾಗಿದೆ. ಜೊತೆಗೆ ಕೇವಲ ಬಿಜೆಪಿ ಒಂದೇ ಪಕ್ಷಕ್ಕೆ 342 ಸೀಟ್‌ಗಳು ಸಿಗಲಿದೆ ಅಂತ ಪ್ರಡಿಕ್ಟ್‌ ಮಾಡಲಾಗಿದೆ.

-masthmagaa.com

Contact Us for Advertisement

Leave a Reply