ಕಬಡ್ಡಿ, ವಾಲಿಬಾಲ್, ಫುಟ್ಬಾಲ್ ಆಡಿದ ಭಾರತ-ಅಮೆರಿಕ ಯೋಧರು!

masthmagaa.com:

ಭಾರತ ಅಮೆರಿಕ ಸೇನಾ ಸಹಕಾರವನ್ನು ಮತ್ತಷ್ಟು ಹೆಚ್ಚಿಸಲು ಅಲಾಸ್ಕಾದಲ್ಲಿ 15 ದಿನಗಳ ಸಮರಾಭ್ಯಾಸ ನಡೆಸಲಾಗ್ತಿದೆ. ಈ ನಡುವೆ ಎರಡೂ ದೇಶಗಳ ಯೋಧರು 4 ತಂಡಗಳನ್ನು ಮಾಡಿಕೊಂಡು, ಕಬಡ್ಡಿ, ಫುಟ್ಬಾಲ್, ವಾಲಿಬಾಲ್ ಆಟವಾಡಿದ್ದಾರೆ. ಭಾರತೀಯ ಯೋಧರು ಫುಟ್ಬಾಲ್ ಕಲಿಯೋಕೆ ಯತ್ನಿಸಿದ್ರೆ, ಅಮೆರಿಕ ಯೋಧರು ಕಬಡ್ಡಿ ಕಲಿಯಲು ಯತ್ನಿಸಿದ್ದಾರೆ. ಅಕ್ಟೋಬರ್ 15ರಿಂದ ಶುರುವಾಗಿರೋ ಈ ಸಮರಾಭ್ಯಾಸ ಅಕ್ಟೋಬರ್ 29ರವರೆಗೆ ನಡೆಯಲಿದೆ. ಭಾರತ ಸೇನೆಯ ಇನ್​ಫ್ಯಾಂಟ್ರಿ ಬೆಟಾಲಿಯನ್​ನ 350 ಮಂದಿ ಯೋಧರು ಭಾಗಿಯಾಗಿದ್ದಾರೆ.

-masthmagaa.com

Contact Us for Advertisement

Leave a Reply