ಭಾರತದ ಪರ 1000 ರನ್‌ ಸಿಡಿಸಿದ ಮೊದಲ ಬ್ಯಾಟ್ಸ್‌ಮ್ಯಾನ್‌:ವಿರಾಟ್‌ ಕೊಹ್ಲಿ!

masthmagaa.com:

ಇಂದು ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತ, ಬಾಂಗ್ಲಾ ವಿರುದ್ದ 5 ರನ್‌ಗಳ ಜಯ ಸಾಧಿಸಿದೆ. ಟಾಸ್‌ ಸೋತು ಬ್ಯಾಟಿಂಗ್‌ ಆರಂಭಿಸಿದ ಭಾರತ 6 ವಿಕೆಟ್‌ ನಷ್ಟಕ್ಕೆ 184 ರನ್‌ಗಳ ಗುರಿ ನೀಡಿತು. ಬಳಿಕ ಚೇಸ್‌ ಮಾಡಿದ ಬಾಂಗ್ಲಾ ತಂಡಕ್ಕೆ ಮಳೆ ಅಡ್ಡಿಬಂದ ಕಾರಣ, 16 ಒವರ್‌ಗೆ 151 ರನ್‌ಗಳ ಗುರಿ ನೀಡಲಾಯ್ತು. ಮತ್ತೆ ಬ್ಯಾಟಿಂಗ್‌ ಆರಂಭಿಸಿದ ಬಾಂಗ್ಲಾ 6 ವಿಕೆಟ್‌ ನಷ್ಟಕ್ಕೆ 145 ರನ್‌ ಪಡೆಯುವಲ್ಲಿ ಶಕ್ತವಾಯಿತು.
ಇನ್ನೊಂದ್‌ ಕಡೆ ಟೀಂ ಇಂಡಿಯಾದ ಬ್ಯಾಟ್ಸ್‌ಮ್ಯಾನ್‌ ಕಿಂಗ್‌ ಕೊಹ್ಲಿ ಟಿ20 ವಿಶ್ವಕಪ್‌ನಲ್ಲಿ ಅತೀ ಹೆಚ್ಚು ರನ್‌ ಗಳಿಸಿದ ಆಟಗಾರ ಅನ್ನೊ ನೂತನ ದಾಖಲೆ ಬರೆದಿದ್ದಾರೆ. ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಭಾರತದ ಪರ 1000 ರನ್‌ ಸಿಡಿಸಿದ ಮೊದಲ ಬ್ಯಾಟ್ಸ್‌ಮ್ಯಾನ್‌ ಎಂಬ ದಾಖಲೆ ಸೃಷ್ಠಿಸಿದ್ರು. ಇಂದು ಬಾಂಗ್ಲಾದೇಶದ ವಿರುದ್ದ ಬ್ಯಾಟಿಂಗ್‌ ಆರಂಭಿಸುತ್ತಿದ್ದಂತೆ, ಲಂಕಾದ ಮಹೇಲ ಜಯವರ್ಧನೆ ಬಾರಿಸಿದ್ದ 1,016 ರನ್‌ಗಳ ದಾಖಲೆಯನ್ನ ಮುರಿದಿದ್ದಾರೆ. ಈ ಮೂಲಕ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್‌ ಬಾರಿಸಿದ ವಿಶ್ವದ ಮೊದಲ ಆಟಗಾರ ಅನ್ನೊ ಇತಿಹಾಸ ಸೃಷ್ಠಿಸಿದ್ದಾರೆ.

-masthmagaa.com

Contact Us for Advertisement

Leave a Reply