ಭಾರತದಲ್ಲಿ 2022ರಲ್ಲಿ ವಿಪರೀತ ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ: ಅಮೆರಿಕ

masthmagaa.com:

2022ರಲ್ಲಿ ಭಾರತದಲ್ಲಿ ಅತಿಯಾದ ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ ಅಂತ ಅಮೆರಿಕ ಹೇಳಿದೆ. ಪ್ರತಿವರ್ಷದಿಂದ ಈ ಬಾರಿ ಕೂಡ ಅಮೆರಿಕ ಜಗತ್ತಿನ ಮಾನವ ಹಕ್ಕುಗಳ ಬಗ್ಗೆ ವರದಿ ಮಾಡಿದೆಯಂತೆ. ಆ ವರದಿಯ ಪ್ರಕಾರ, ಭಾರತದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು, ಬೇಕಾಬಿಟ್ಟಿ ಹತ್ಯೆಗಳು ತುಂಬಾ ನಡೆದಿವೆಯಂತೆ. ಹಾಗೇ ಪತ್ರಿಕಾ ಸ್ವಾತಂತ್ರ ದಮನ, ಧಾರ್ಮಿಕ ಹಾಗೂ ಅಲ್ಪಸಂಖ್ಯಾತರನ್ನ ಗುರಿಯಾಗಿಸಿಕೊಂಡು ಹಿಂಸಾಚಾರ ಮಾಡೋದು ಕಂಟಿನ್ಯೂ ಆಗಿದೆ ಅಂತ ಅಮೆರಿಕ ಹೇಳಿದೆ. ಜೊತೆಗೆ ರಾಜಕೀಯ ನಾಯಕರ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡೋದು. ಪತ್ರಕರ್ತರ ಮೇಲೆ ಸುಖಾ ಸುಮ್ಮನೇ ಕೇಸ್‌ ಹಾಕಿ ಬೆದರಿಸೋದು. ಆ ಮೂಲಕ ಅಭಿವ್ಯಕ್ತಿ ಸ್ವಾತಂತ್ರವನ್ನ ಹತ್ತಿಕ್ಕೋದೆಲ್ಲಾ ನಡೀತಾನೇ ಇದೆ. ಹೀಗೆ ಮಾನವ ಹಕ್ಕುಗಳು ನಿರಂತರವಾಗಿ ಉಲ್ಲಂಘನೆ ಆಗ್ತಿದೆ ಅಂತ ಅಮೆರಿಕದ ವರದಿ ತಿಳಿಸಿದೆ. ಇದನ್ನ ಅಮೆರಿಕದ ಸೆಕ್ರಟ್ರಿ ಆಫ್‌ ಸ್ಟೇಟ್‌ ಆಂಟನಿ ಬ್ಲಿಂಕನ್‌ ಅವರೇ ಬಿಡುಗಡೆ ಮಾಡಿದ್ದಾರೆ. ಇದೇ ವರದಿಯಲ್ಲಿ ರಷ್ಯಾ ಹಾಗೂ ಚೀನಾದ ಬಗ್ಗೆ ಕೂಡ ಉಲ್ಲೇಖ ಮಾಡಲಾಗಿದೆ. ಈ ಎರಡೂ ದೇಶಗಳಲ್ಲಿ ಜಗತ್ತಿನಲ್ಲೇ ಅತಿಹೆಚ್ಚು ಮಾನವ ಹಕ್ಕುಗಳ ಉಲ್ಲಂಘನೆ ಆಗಿದೆ ಅಂತ ಅಮೆರಿಕ ಹೇಳಿದೆ. ಹೀಗೆ ಎಲ್ಲಾ ದೇಶಗಳಿಗೂ ಮಾನವ ಹಕ್ಕುಗಳ ಪಾಠ ಮಾಡ್ಕೊಂಡು ಅಮೆರಿಕ ತಿರುಗ್ತಾ ಇದ್ರೆ ಆ ಕಡೆ ಅಮೆರಿಕದ ಒಳಗಡೆನೇ ಮತ್ತೊಂದು ಮನಕಲಕುವ ಘಟನೆಯಾಗಿದೆ. ಟೆಕ್ಸಾಸ್‌ನ ಅರ್ಲಿಂಗ್ಟನ್‌ ನಗರದಲ್ಲಿರುವ ಹೈ ಸ್ಕೂಲ್‌ ಹೊರಗೆ ಗುಂಡಿನ ಕಾಳಗ ನಡೆದು ಓರ್ವ ವಿದ್ಯಾರ್ಥಿ ಪ್ರಾಣ ಬಿಟ್ಟಿದ್ದಾನೆ. ಇನ್ನೊಬ್ಬ ಗಾಯಗೊಂಡಿದ್ದಾನೆ. ಶಾಲೆಗೆ ಹೆಚ್ಚಿನ ವಿದ್ಯಾರ್ಥಿಗಳು ಬಂದಿರಲಿಲ್ಲ. ಇಲ್ಲ ಅಂದ್ರೆ ಸಾವಿನ ಸಂಖ್ಯೆ ಇನ್ನಷ್ಟು ಜಾಸ್ತಿ ಆಗ್ಬಿಡ್ತಿತ್ತು ಅಂತ ಅಲ್ಲಿನ ಪೊಲೀಸರು ಹೇಳಿದ್ದಾರೆ. ಹೇಳೋದು ಆಚಾರ ತಿನ್ನೋದು ಬದನೆಕಾಯಿ ಅನ್ನೋದು ಇದಕ್ಕೇನೆ. ತನ್ನ ದೇಶದಲ್ಲೇ ಗುಂಡೇಟಿಗೆ, ಜನಾಂಗೀಯ ಕಾರಣಕ್ಕೆ ಬೀದಿಯಲ್ಲೇ ಜನ ಸಾಯ್ತಾ ಇದ್ರೆ ಅಮೆರಿಕ ಮಾತ್ರ ಮಾನವ ಹಕ್ಕುಗಳ ಪಾಠ ಮಾಡ್ಕೊಂಡು ಬಾಯಿ ಬಡಿತಾ ಇದೆ.

-masthmagaa.com

Contact Us for Advertisement

Leave a Reply