ಭಾರತ ಮೂಲದ ಈಕೆ ಈಗ ಜಿಲ್ ಬೈಡೆನ್ ಯೋಜನಾ ನಿರ್ದೇಶಕಿ..!

masthmagaa.com:

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋಸೆಫ್‌ ಬೈಡೆನ್‌ ಅವರ ಹೆಂಡತಿ ಫಸ್ಟ್‌ ಲೇಡಿ ಜಿಲ್‌ ಬೈಡೆನ್‌ ಅವರ ಯೋಜನಾ ನಿರ್ದೇಶಕಿಯಾಗಿ ಭಾರತೀಯ ಮೂಲದ ಮಾಲಾ ಅಡಿಗ ಎಂಬುವವರನ್ನ ನೇಮಿಸಿಕೊಂಡಿದ್ದಾರೆ.

ಮಾಲಾ ಅಡಿಗ ಈ ಹಿಂದೆ ಜಿಲ್ ಬೈಡೆನ್‌ ಅವರ ಹಿರಿಯ ಸಲಹೆಗಾರ್ತಿಯಾಗಿ ಕೆಲಸ ಮಾಡಿದ್ದರು. ಬೈಡೆನ್‌ ಹಾಗೂ ಕಮಲ ಹ್ಯಾರಿಸ್‌ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಇವರು ಹಿರಿಯ ಯೋಜನಾ ಸಲಹೆಗಾರ್ತಿಯಾಗಿ ಕೆಲಸ ಮಾಡಿದ್ದಾರೆ. ಈ ಹಿಂದೆ ಮಾಲಾ ಅಡಿಗ ಬೈಡೆನ್‌ ಫೌಂಡೇಶನ್​​​​​ನ ಉನ್ನತ ಶಿಕ್ಷಣ ಮತ್ತು ಮಿಲಿಟರಿ ಫ್ಯಾಮಿಲೀಸ್​​​ನ ನಿರ್ದೇಶಕಿ ಕೂಡ ಆಗಿದ್ದರು.

ಇವರು ಹಿಂದೆ ಇದ್ದ ಬರಾಕ್ ಒಬಾಮಾ ಸರ್ಕಾರದಲ್ಲಿ ಬ್ಯೂರೋ ಆಫ್ ಎಜುಕೇಶನ್ ಮತ್ತು ಕಲ್ಚರಲ್  ಅಫೇರ್ಸ್​​ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಉಪ ಸಹಾಯಕ ಕಾರ್ಯದರ್ಶಿಯಾಗಿದ್ದರು. ಇಲ್ಲಿನೊಯಿಸ್ ಮೂಲದ ಮಾಲಾ ಅಡಿಗ ಗ್ರಿನ್ನೆಲ್ ಕಾಲೇಜಿನಲ್ಲಿ ಪದವಿ ಗಳಿಸಿ ಮಿನ್ನೆಸೊಟಾ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್, ಯೂನಿವರ್ಸಿಟಿ ಆಫ್ ಚಿಕಾಗೋ ಲಾ ಸ್ಕೂಲ್​​​​ನಲ್ಲಿ ಪದವಿ ಗಳಿಸಿ ವಕೀಲಿ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ರು. ನಂತರ 2008ರಲ್ಲಿ ಬರಾಕ್ ಒಬಾಮಾ ಆಡಳಿತದಲ್ಲಿ ಅಸೋಸಿಯೇಟ್ ಅಟಾರ್ನಿ ಜನರಲ್ ಆಗಿ ಕೆಲಸ ಮಾಡಿದ್ರು.

-masthmagaa.com

Contact Us for Advertisement

Leave a Reply