ಎಚ್ಚರ ಎಚ್ಚರ.. ವಾಟ್ಸಾಪ್ ಬಳಕೆದಾರರಿಗೆ ಡೇಂಜರ್ ‘ಸಿಗ್ನಲ್’!

masthmagaa.com:

ನಮ್ಮಲ್ಲಿ ಎಷ್ಟೋ ಜನ ಬೆಳಗ್ಗೆದ್ದು ಮುಖ ತೊಳಿತೀವೋ ಇಲ್ವೋ.. ವಾಟ್ಸಾಪ್​​​​ ಮಾತ್ರ ನೋಡೇ ನೋಡ್ತೀವಿ.. ಮೆಸೇಜ್ ಬಂದಿದ್ರೆ ರಿಪ್ಲೇ ಮಾಡ್ತೀವಿ. ಇಲ್ಲದಿದ್ರೆ ಯಾರ್ಯಾರ್ ಏನೇನ್ ಸ್ಟೇಟಸ್ ಹಾಕಿದ್ದಾರೆ ಅಂತ ನೋಡಿ ಆಮೇಲೆ ಮುಂದಿನ ದಿನಚರಿ ಶುರುವಾಗುತ್ತೆ.. ಆದ್ರೆ ವಾಟ್ಸಾಪ್ ಬಳಕೆದಾರರು ಇನ್ಮುಂದೆ ಸ್ವಲ್ಪ ಹುಷಾರಾಗಿ ಇರಬೇಕು. ಯಾಕಂದ್ರೆ ವಾಟ್ಸಾಪ್ ಹೊಸ ಪ್ರೈವಸಿ ಪಾಲಿಸಿ ಸ್ವಲ್ಪ ಅಪಾಯಕಾರಿ ಅಂತ ಹೇಳಲಾಗ್ತಾ ಇದೆ. ನಿಮಗೂ ಕೂಡ ವಾಟ್ಸಾಪ್ ಓಪನ್ ಮಾಡಿದ ಕೂಡಲೇ ‘ಅಗ್ರೀ’ ಅಥವಾ ‘ಕ್ಲೋಸ್’ ಅನ್ನೋ ಆಪ್ಶನ್ ಬಂದಿರಬಹುದು. ಎಷ್ಟೋ ಜನ ಅದೇನು ಅಂತಾನೂ ನೋಡೋಲ್ಲ. ಅಷ್ಟು ಅರ್ಜೆಂಟ್ ಮೆಸೇಜ್ ಮಾಡೋಕೆ. ಅಗ್ರೀ ಕೊಟ್ಬಿಡ್ತಾರೆ.. ಆದ್ರೆ ಈ ಮೂಲಕ ವಾಟ್ಸಾಪ್ ನಿಮ್ಮ ಮಾಹಿತಿಯನ್ನ ಪಡೆಯಲಿದೆ. ಅಂದ್ರೆ ನಿಮ್ಮ ಫೋನ್ ನಂಬರ್, ಐಪಿ ಅಡ್ರಸ್​, ಮೊಬೈಲ್ ಡಿವೈಸ್​ನ ಮಾಹಿತಿ, ಯೂಸರ್ ಐಡಿ, ಜಾಹೀರಾತು ಮಾಹಿತಿ, ಇ-ಮೇಲ್ ಅಡ್ರಸ್, ಕಾಂಟಾಕ್ಟ್ಸ್​​, ಪೇಯ್ಮೆಂಟ್ ಮಾಹಿತಿ.. ಹೀಗೆ ಹತ್ತು ಹಲವು ಮಾಹಿತಿ ಪಡೆದು ಫೇಸ್​​ಬುಕ್​​ಗೆ ನೀಡಲಿದೆ ಅಂತ ಹೇಳಲಾಗ್ತಿದೆ. ಹಿಗಾಗಿಯೇ ವಾಟ್ಸಾಪ್​​​​ಗೆ ಪರ್ಯಾಯವಾಗಿರೋ ಮೆಸೆಂಜರ್​ ಆಪ್​​ಗಳಿಗೆ ಲಾಟರಿ ಹೊಡೆದಂತಾಗಿದೆ. ಜಗತ್ತಿನ ನಂಬರ್ 1 ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್​​ ‘ಯೂಸ್ ಸಿಗ್ನಲ್’ ಅಂತ ಟ್ವೀಟ್ ಮಾಡಿದ್ದಾರೆ. ಸಿಗ್ನಲ್ ಅನ್ನೋದು ಒಂದು ಮೆಸೆಂಜರ್ ಆಪ್.. ಇದನ್ನು ಸೃಷ್ಟಿಸಿರೋದು ಬೇರೆ ಯಾರೂ ಅಲ್ಲ. ಈ ಹಿಂದೆ ವಾಟ್ಸಾಪ್ ಸೃಷ್ಟಿಸಿದ್ದ ಬ್ರಿಯಾನ್ ಆಕ್ಟನ್​​ ಅವರೇ ಈಗ ಸಿಗ್ನಲ್ ಆಪ್ ಹುಟ್ಟುಹಾಕಿದ್ದಾರೆ. ಫೇಸ್​ಬುಕ್ ವಾಟ್ಸಾಪ್​​ನ್ನು ಖರೀದಿಸಿದ ಕೆಲ ಗಂಟೆಗಳಲ್ಲೇ ಪ್ರೈವಸಿ ರೂಲ್ಸ್ ಚೇಂಜ್ ಮಾಡಿತ್ತು. ಹೀಗಾಗಿಯೇ ಬಳಕೆದಾರರ ಮಾಹಿತಿಗೆ ಧಕ್ಕೆಯಾಗುತ್ತಿದೆ ಅಂತ ಝೂಕರ್ ಬರ್ಗ್​ ಜೊತೆ ಕಿರಿಕ್ ಮಾಡ್ಕೊಂಡು ವಾಟ್ಸಾಪ್​ನಿಂದಲೇ ಹೊರಬಂದಿದ್ರು ಸಂಸ್ಥಾಪಕ ಬ್ರಿಯಾನ್ ಆಕ್ಟನ್​​. ಜೊತೆಗೆ ವಾಟ್ಸಾಪ್​​ನಲ್ಲಿರೋ ಎಲ್ಲಾ ಫೀಚರ್ಸ್​ ಇರುವ ಮತ್ತೊಂದು ಆಪ್ ಹುಟ್ಟುಹಾಕಿದ್ರು. ಅದೇ ಸಿಗ್ನಲ್.. ಇದೇನೂ ಹೊಸ ಆಪ್ ಅಲ್ಲ. 2018ರಲ್ಲೇ ಈ ಆಪ್ ಸೃಷ್ಟಿಯಾಗಿತ್ತು. ಆದ್ರೀಗ ವಾಟ್ಸಾಪ್ ಹೊಸ ಪ್ರೈವೆಸಿ ಪಾಲಿಸಿ ಮತ್ತು ಎಲಾನ್ ಮಸ್ಕ್​ ಟ್ವೀಟ್​ ಬಳಿಕ ಸಿಗ್ನಲ್ ಆಪ್ ಬಗ್ಗೆ ಭಾರಿ ಚರ್ಚೆಯಾಗ್ತಿದೆ. ಇವತ್ತು ಭಾರತದಲ್ಲೂ ಕೂಡ ಟ್ವಟಿರ್​ನಲ್ಲಿ ಸಿಗ್ನಲ್ ಆಪ್ ಟ್ರೆಂಡಿಂಗ್ ಇತ್ತು. ಜೊತೆಗೆ ಗೋಗಲ್ ಪ್ಲೇಸ್ಟೋರ್​ನಲ್ಲೂ ಕೂಡ. ಈ ಸಂಬಂಧ ತ್ರಿವರ್ಣ ಧ್ವಜದ ಎಮೋಜಿ ಹಾಕಿ ಟ್ವೀಟ್ ಮಾಡಿದ್ದ ಸಿಗ್ನಲ್ ಕಂಪನಿ, ನೋಡಿ ನೀವು ಏನ್ ಮಾಡಿದ್ದೀರಿ ಅಂತ ಹೇಳಿತ್ತು. ಅಂದ್ರೆ, ಭಾರತದಲ್ಲೂ ತುಂಬಾ ಜನ ಡೌನ್ಲೋಡ್ ಮಾಡ್ತಿದಾರೆ ಅಂತ ಅರ್ಥ.

-masthmagaa.com

Contact Us for Advertisement

Leave a Reply