ಕಮ್ಮಿ ಬೆಲೆಗೆ ಅಕ್ಕಿ ನೀಡೋಕೆ ಮುಂದಾದ ಪಾಕ್‌! ಭಾರತಕ್ಕೆ ಹೊಸ ಸವಾಲು!

masthmagaa.com:

ಭಾರತ ಪಾಕಿಸ್ತಾನ ನಡುವೆ ಅಕ್ಕಿ ಮಾರಾಟಕ್ಕೆ ಸಂಬಂಧಪಟ್ಟಂತೆ ಪೈಪೋಟಿ ಶುರುವಾಗಿದ್ದು ಈಗ ಭಾರತದ ಅಕ್ಕಿ ಮಾರ್ಕೆಟ್‌ ಕಸಿಯೋಕೆ ಪಾಕ್‌ ದೊಡ್ಡ ಹೆಜ್ಜೆಗಳನ್ನ ಇಡ್ತಿದೆ. ಪಾಕ್‌ ತಾನು ಬೆಳೆಸಿರೋ ಬಾಸ್ಮತಿ ಅಕ್ಕಿಯನ್ನ ಭಾರತಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗಿದೆ…ಇದರಿಂದ 2024ರಲ್ಲಿ ಅಂದ್ರೆ ಈ ವರ್ಷ ಭಾರತದ ಬಾಸ್ಮತಿ ಅಕ್ಕಿ ಎಕ್ಸ್‌ಪೋರ್ಟ್‌ ರೇಟ್‌ ಪಾಕಿಸ್ತಾನಕ್ಕಿಂತ ಇಳಿಕೆಯಾಗೋ ಚಾನ್ಸಸ್‌ ಇದೆ ಅಂತ ಅಧಿಕಾರಿಗಳು ಹೇಳಿದ್ದಾರೆ…ಅಂದ್ಹಾಗೆ ಭಾರತ ಮತ್ತು ಪಾಕ್‌ ಇಡೀ ವಿಶ್ವದಲ್ಲೇ ಬಾಸ್ಮತಿ ಅಕ್ಕಿಯ ಪ್ರಮುಖ ರಫ್ತುದಾರ ದೇಶಗಳು. ಈ ವಿಷಯವಾಗಿ ಸದಾ ಭಾರತ ಮತ್ತು ಪಾಕ್‌ ಮಧ್ಯೆ ಪೈಪೋಟಿ ನಡೀತಾನೇ ಇರುತ್ತೆ. ಎರಡೂ ದೇಶಗಳೂ ತಮ್ಮ ಅಕ್ಕಿಯನ್ನ ಹೆಚ್ಚಾಗಿ ಇರಾನ್‌, ಇರಾಕ್‌, ಯೆಮೆನ್‌, ಸೌದಿ ಅರೇಬಿಯಾ, ಯುಎಇ ಮತ್ತು ಅಮೆರಿಕಕ್ಕೆ ಎಕ್ಸ್‌ಪೋರ್ಟ್‌ ಮಾಡ್ತಿದ್ವು. ಆದ್ರೆ ಬಾಸ್ಮತಿ ರಫ್ತಿನ ಪ್ರಮಾಣದಲ್ಲಿ ಇದುವರೆಗೂ ಭಾರತ ಪ್ರಾಬಲ್ಯ ಸಾಧಿಸಿದೆ.. ವರ್ಷದಿಂದ ವರ್ಷಕ್ಕೆ ಇಂಪ್ರೂಮೆಂಟ್‌ ಕಾಣ್ತಿದೆ….ಕಳೆದ ವರ್ಷ ಅಂದ್ರೆ 2023ರಲ್ಲಿ ಭಾರತದ ಬಾಸ್ಮತಿ ರಫ್ತಿನಲ್ಲಿ ಸಿಕ್ಕಾಪಟ್ಟೆ ಪಾಸಿಟಿವ್‌ ಬೆಳವಣಿಗೆ ಕಂಡುಬಂದಿತ್ತು. ರಫ್ತಿನ ರೇಟು 11.5% ಏರಿಕೆಯಾಗಿ ಭಾರತ ಒಟ್ಟು 4.9 ಮಿಲಿಯನ್‌ ಮೆಟ್ರಿಕ್‌ ಟನ್‌ಗಳಷ್ಟು ಬಾಸ್ಮತಿ ಅಕ್ಕಿ ಎಕ್ಸ್‌ಪೋರ್ಟ್‌ ಮಾಡಿತ್ತು. ಖರೀದಿದಾರರು ಬಾಸ್ಮತಿಯನ್ನ ದೊಡ್ಡ ಪ್ರಮಾಣದಲ್ಲಿ ಆಮದು ಮಾಡ್ಕೊಂಡು ಸ್ಟಾಕ್‌ ಮಾಡಿ ಇಡೋಕೆ ಮುಗಿ ಬೀಳ್ತಿದ್ರಿಂದ ಭಾರತದ ಅಕ್ಕಿ ರಫ್ತು ಹೆಚ್ಚಾಗಿತ್ತು. ಆ ಸಮಯದಲ್ಲಿ ಪಾಕ್‌ ತನ್ನ ಬಾಸ್ಮತಿ ಅಕ್ಕಿ ಉತ್ಪಾದನೆಯಲ್ಲಿ ಮತ್ತು ರಫ್ತಿನಲ್ಲಿ ಸಮಸ್ಯೆಗಳನ್ನ ಫೇಸ್‌ ಮಾಡ್ತಿತ್ತು. ಕೇವಲ 3.7 ಮಿಲಿಯನ್‌ ಟನ್‌ಗಳಷ್ಟು ಬಾಸ್ಮತಿ ಉತ್ಪಾದನೆ ಮಾಡಿತ್ತು. ಪ್ರವಾಹ ಪರಿಸ್ಥಿತಿ ಜಾಸ್ತಿ ಆಗಿದ್ದರಿಂದ ಈ ರೀತಿ ಆಗಿತ್ತು.

ಆದ್ರೆ ಈ ವರ್ಷ ತನ್ನ ಉತ್ಪಾದನೆಯನ್ನ ಹೆಚ್ಚು ಮಾಡಿರೋ ಪಾಕ್‌, ಅದನ್ನ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಿ ಜಾಗತಿಕ ಮಾರುಕಟ್ಟೆಯಲ್ಲಿ ಭಾರತಕ್ಕೆ ಚಾಲೆಂಜ್‌ ಮಾಡೋಕೆ ಹೊರಟಿದೆ. ಪಾಕ್‌ 2023-24 ಆರ್ಥಿಕ ವರ್ಷದಲ್ಲಿ 5 ಮಿಲಿಯನ್‌ ಟನ್‌ಗಳಷ್ಟು ಬಾಸ್ಮತಿ ಉತ್ಪಾದನೆ ಮಾಡೋ ಸಾಧ್ಯತೆ ಇದ್ದು.. ಇದು ಭಾರತದ ಮಾರ್ಕೆಟ್‌ಗೆ ಹಿನ್ನೆಡೆ ಉಂಟು ಮಾಡುತ್ತೆ ಅಂತ ಹೇಳಲಾಗ್ತಿದೆ. ಇನ್ನು ಬಾಸ್ಮತಿ ಅಕ್ಕಿಗೆ ಮಿಡಲೀಸ್ಟ್‌ ಮತ್ತು ಯುರೋಪ್‌ ರಾಷ್ಟ್ರಗಳಿಂದ ಡಿಮ್ಯಾಂಡ್ ಹೆಚ್ಚಾಗಿರೋದ್ರಿಂದ ಹೊಸ ಸೀಸನ್‌ನ ಭಾರತೀಯ ಬಾಸ್ಮತಿ ಅಕ್ಕಿಯ ಹೋಲ್‌ಸೇಲ್‌ ದರ‌ ಕೂಡ ಹೆಚ್ಚಾಗಿದೆ. ಕಳೆದ ವರ್ಷಕ್ಕೆ ಕಂಪೇರ್‌ ಮಾಡಿದ್ರೆ 10 ರಿಂದ 15% ಏರಿಕೆಯಾಗಿದೆ. ಈ ಮೂಲಕ ಹೊಸ ಋತುವಿನಲ್ಲಿ ಭಾರತದ ಬಾಸ್ಮತಿ ಅಕ್ಕಿ ರೇಟ್‌ ಅದ್ರಲ್ಲೂ ಉನ್ನತ ಗುಣಮಟ್ಟದ ಬಾಸ್ಮತಿ ಅಕ್ಕಿ ಬೆಲೆ ಒಂದು ಟನ್‌ಗೆ 45,000 ಇದ್ದಿದ್ದು….ಈಗ 50,000 ರೂಪಾಯಿ ಆಗಿದೆ..ಈ ಎಲ್ಲಾ ಕಾರಣದಿಂದ ಭಾರತದ ದುಬಾರಿ ಬೆಲೆಯ ಅಕ್ಕಿಗೆ ಪ್ರತಿಯಾಗಿ ಕಡಿಮೆ ಬೆಲೆಯಲ್ಲಿ ತನ್ನ ಅಕ್ಕಿಯನ್ನ ಮಾರಾಟ ಮಾಡೋಕೆ ಪಾಕ್ ಮುಂದಾಗಿದೆ..ಇದರಿಂದ ಭಾರತದ ಅಕ್ಕಿ ರಫ್ತಿಗೆ, ಭಾರತದ ಅಕ್ಕಿ ಮಾರ್ಕೆಟ್‌ಗೆ ಸ್ವಲ್ಪ ಹಿನ್ನೆಡೆ ಉಂಟಾಗಬೋದು ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply