8.7% ಏರಿಕೆ ಕಂಡ ಜಿಡಿಪಿ, ವಿತ್ತೀಯ ಕೊರತೆ ಕೂಡ ಕಡಿಮೆ.

masthmagaa.com:

ಯುಕ್ರೇನ್‌ ಯುದ್ದದಿಂದ ಆರ್ಥಿಕ ಜಗತ್ತು ಅಸ್ತವ್ಯಸ್ತವಾಗಿರೋ ನಡುವೆಯೇ ಕೇಂದ್ರ ಸರ್ಕಾರ ಇವತ್ತು ಕೆಲವು ಅಂಕಿ-ಅಂಶಗಳನ್ನ ಬಿಡುಗಡೆ ಮಾಡಿದೆ. ಕೇಂದ್ರ ಸಾಂಖ್ಯಿಕ ಹಾಗೂ ಯೋಜನಾ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರೋ ಈ ಡೇಟಾ ಪ್ರಕಾರ, ಕಳೆದ ಆರ್ಥಿಕ ವರ್ಷ 2021-22ರಲ್ಲಿ ಜಿಡಿಪಿ ಶೇ 8.7 ಏರಿಕೆಯಾಗಿದೆ. ಅದೇ ನಾಲ್ಕನೇ ಕ್ವಾರ್ಟರ್‌ನಲ್ಲಿ 4.1% ವೃದ್ಧಿಯಾಗಿದೆ. ಕಳೆದ ಇನ್ನ ಈ ಹಿಂದಿನ 2020-21ರ ಆರ್ಥಿಕ ಅವಧಿಯಲ್ಲಿ ಜಿಡಿಪಿ ಮೈನಸ್‌ಗೆ ಹೊರಟೋಗಿತ್ತು. ಕೋವಿಡ್‌ ಕಾರಣದಿಂದ 6.6% ಜಿಡಿಪಿ ಕಡಿಮೆಯಾಗಿತ್ತು. ಆದ್ರೆ ಈಗ ಅದು ಚೇತರಿಸಿಕೊಂಡಿದೆ, ಕೇಂದ್ರ 8.9% ಏರಿಕೆಯಾಗುತ್ತೆ ಅಂತ ಅಂದಾಜಿಸಿತ್ತು ಆದ್ರೆ 8.7% ಜಿಡಿಪಿ ಏರಿಕೆಯಾಗಿದೆ. ಇನ್ನ 2021-22ನೇ ಸಾಲಿನ ವಿತ್ತೀಯ ಕೊರತೆ 6.9% ಆಗಬಹುದು ಅಂತ ಬಜೆಟ್‌ ನಂತ್ರ ಅಂದಾಜಿಸಲಾಗಿತ್ತು. ಆದ್ರೆ ಅದು ಈಗ ಅದಕ್ಕಿಂತಲೂ ಕಡಿಮೆ 6.71% ಆಗಿದೆ.

-masthmagaa.com

Contact Us for Advertisement

Leave a Reply