ಕೊನೆಗೂ ಇಳಿಕೆಯಾದ ಚಿಲ್ಲರೆ ಹಣದುಬ್ಬರ! 2022ರಲ್ಲಿ ಮೊದಲ ಬಾರಿಗೆ 6%ಗಿಂತ ಕಡಿಮೆ!

masthmagaa.com:

ದೇಶದಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಕೊನೆಗೂ ಇಳಿಕೆಯಾಗಿದೆ. ಈ ವರ್ಷದಲ್ಲೇ ಮೊದಲ ಬಾರಿಗೆ 6%ಗಿಂತ ಕಡಿಮೆಯಾಗಿ 5.88%ಗೆ ತಲುಪಿದೆ ಅಂತ ಸರ್ಕಾರ ರಿಲೀಸ್‌ ಮಾಡಿರೊ ಡೇಟಾದಿಂದ ತಿಳಿದು ಬಂದಿದೆ. ಇದರೊಂದಿಗೆ ಈ ವರ್ಷದಲ್ಲಿ ಮೊದಲ ಬಾರಿಗೆ RBIನ ಲಿಮಿಟ್‌ ಒಳಗಡೆ ಬಂದಿದೆ. ಅಂದ್ರೆ RBIನ tolerance band 2-6% ಮಿತಿಯ ಒಳಗಿದೆ. ಇನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ 5.59% ಹಣದುಬ್ಬರವಿತ್ತು. ಅದಾದ ಬಳಿಕ ಏರಿಕೆಯಾಗ್ತಾನೆ ಹೋಗಿತ್ತು. ಅದ್ರಲ್ಲೂ ಏಪ್ರಿಲ್‌ನಲ್ಲಿ 7.79%ಗೆ ತಲುಪಿ, ಕಳೆದ 8 ವರ್ಷಗಳಲ್ಲೇ ಅತಿಹೆಚ್ಚು ಹಣದುಬ್ಬರ ದಾಖಲಾಗಿತ್ತು. ಅಂದ್ಹಾಗೆ + or – 2%ನೊಂದಿಗೆ ಹಣದುಬ್ಬರವನ್ನ 2 ರಿಂದ 4% ನಷ್ಟಿಡಲು ಸರ್ಕಾರ RBIಗೆ ಸೂಚಿಸಿದೆ.

-masthmagaa.com

Contact Us for Advertisement

Leave a Reply