ಜಿ 20 ಶೃಂಗಸಭೆಯಲ್ಲಿ ಪುಟಿನ್‌ ಝಲೆನ್ಸ್‌ಕಿ ಮುಖಾಮುಖಿ!

masthmagaa.com:

ರಷ್ಯಾ ಮತ್ತು ಯುಕ್ರೇನ್‌ ನಡುವೆ ರಣ ಕಾಳಗ ನಡೆಯುತ್ತಿದೆ. ಇದರ ನಡುವೆ ಇಂಡೋನೇಷ್ಯಾದ ಬಾಲಿ ದ್ವೀಪದಲ್ಲಿ ನಡೆಯಲಿರುವ ಜಿ 20 ಶೃಂಗ ಸಭೆಗೆ ಯುಕ್ರೇನ್‌ ಅಧ್ಯಕ್ಷ ವೊಲೋದಿಮಿರ್‌ ಝಲೆನ್ಸ್‌ಕಿಯನ್ನ ಹಾಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಇಬ್ಬ‌ರನ್ನೂ ಆಮಂತ್ರಿಸಲಾಗಿದೆ. ಇನ್ನು ಈ ಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಭಾಗವಹಿಸೋದನ್ನ ಖಚಿತಪಡಿಸಿದ್ದಾರೆ. ಇನ್ನು ರಷ್ಯಾ-ಯುಕ್ರೇನ್‌ ನಡುವೆ ಯುದ್ದ ಪ್ರಾರಂಭ ಆದಾಗಿನಿಂದ ರಷ್ಯಾವನ್ನ ಜಿ-20 ಯಿಂದ ಹೊರಗಿಡ್ಬೇಕು ಅಂತ ಪಾಶ್ಚಿಮಾತ್ಯ ದೇಶಗಳು ಇಂಡೋನೇಷ್ಯಾದ ಮೇಲೆ ಒತ್ತಡ ಹೇರ್ತಾ ಇದ್ವು. ಆದ್ರೂ ಈಗ ವ್ಲಾಡಿಮಿರ್‌ ಪುಟಿನ್‌ರನ್ನ ಜಿ 20 ಸಭೆಗೆ ಆಮಂತ್ರಿಸಲಾಗಿದೆ. ಇನ್ನು ತನ್ನನ್ನ ಇಂಡೋನೆಷ್ಯಾದ ಜಿ 20 ಶೃಂಗಸಭೆಗೆ ಕರೆದಿರುವ ಬಗ್ಗೆ ಯುಕ್ರೇನ್ ಅಧ್ಯಕ್ಷ ಝಲೆನ್ಸ್‌ಕಿ ಕೂಡ ಕನ್ಫರ್ಮ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply