ಇಂಡೋನೇಷ್ಯಾದ ಜಲಾಂತರ್ಗಾಮಿ ನೌಕೆ ನಾಪತ್ತೆ! ಚೀನಾ ಕೈವಾಡ?

masthmagaa.com:

ಸಮರಾಭ್ಯಾಸದ ವೇಳೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿರೋ ಇಂಡೋನೇಷ್ಯಾದ ಜಲಾಂತರ್ಗಾಮಿ ನೌಕೆಯ ಹುಡುಕಾಟ ಜೋರಾಗಿದೆ. ಆದ್ರೆ ಇಂಡೋನೇಷ್ಯಾದ ಬಳಿ ಜಲಾಂತರ್ಗಾಮಿ ನೌಕೆ ರಕ್ಷಿಸಲು ಬೇಕಾದ ನೌಕೆಗಳಿಲ್ಲ. ಹೀಗಾಗಿ ಸಿಂಗಾಪುರ್ ಮತ್ತು ಆಸ್ಟ್ರೇಲಿಯಾದ ಸಹಾಯ ಯಾಚಿಸಿದ್ದು, ಅವುಗಳು ಕೂಡ ಹುಡುಕಾಟದಲ್ಲಿ ಭಾಗಿಯಾಗಿವೆ. ನಿನ್ನೆ ಮಧ್ಯಾಹ್ನ ಬಾಲಿ ದ್ವೀಪದ ಬಳಿ ಸಮರಾಭ್ಯಾಸದ ವೇಳೆ ಇದ್ದಕ್ಕಿದ್ದಂತೆ ಕೆಆರ್​ಆರ್​​ ನಾನ್​​ಗಲಾ ಅನ್ನೋ ಹೆಸರಿನ ಸಬ್​ಮರೀನ್ ನಾಪತ್ತೆಯಾಗಿದೆ. ಅದ್ರಲ್ಲಿ 53 ಮಂದಿ ಸಿಬ್ಬಂದಿ ಕೂಡ ಇದ್ರು. ಜರ್ಮನಿ ನಿರ್ಮಿತ ಈ ಜಲಾಂತರ್ಗಾಮಿ ನೌಕೆ 1981ರಲ್ಲಿ ಇಂಡೋನೇಷ್ಯಾ ನೌಕಾಪಡೆ ಸೇರಿತ್ತು. ಇಂಡೋನೇಷ್ಯಾ ಸೇನೆಯಲ್ಲಿ 5 ಜಲಾಂತರ್ಗಾಮಿ ನೌಕೆಗಳಿದ್ದು, 2024ರ ವೇಳೆಗೆ ಇದರ ಸಂಖ್ಯೆಯನ್ನು 8ಕ್ಕೆ ಏರಿಸೋ ಗುರಿ ಕೂಡ ಹೊಂದಲಾಗಿತ್ತು. 17 ಸಾವಿರ ದ್ವೀಪಗಳನ್ನು ಹೊಂದಿರೋ ಇಂಡೋನೇಷ್ಯಾ ಜಗತ್ತಿನ ಅತಿದೊಡ್ಡ ದ್ವೀಪಸಮೂಹ ರಾಷ್ಟ್ರವಾಗಿದೆ. ಹೀಗಾಗಿ ಸಮುದ್ರಕ್ಕೆ ಸಂಬಂಧಿಸಿದಂತೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತೆ. ಅದ್ರಲ್ಲೂ ಚೀನಾದ ಸಮುದ್ರ ವಲಯವನ್ನು ತನ್ನದು ಅಂತ ವಾದಿಸುತ್ತಾ ಬಂದಿದೆ ಚೀನಾ.. ಹೀಗಾಗಿ ನೌಕಾಪಡೆ ಬಲಿಷ್ಠಪಡಿಸಿಕೊಳ್ಳಲು ಯತ್ನಿಸುತ್ತಲೇ ಇತ್ತು. ಅದ್ರ ನಡುವೆ ಇಂಥಾ ದುರಂತ ಸಂಭವಿಸಿದೆ.

-masthmagaa.com

Contact Us for Advertisement

Leave a Reply