ಶಾಲೆ ತೆರೆದ, 8 ವಿದ್ಯಾರ್ಥಿನಿಯರ ಗರ್ಭವತಿ ಮಾಡಿ ಜೈಲಿಗೆ ಹೋದ!

masthmagaa.com:

ಇಸ್ಲಾಮಿಕ್​​ ಬೋರ್ಡಿಂಗ್ ಶಾಲೆಯ 13 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿ, 8 ಮಕ್ಕಳನ್ನ ಪ್ರೆಗ್ನೆಂಟ್​ ಮಾಡಿದ ಶಾಲೆಯ ಮಾಲೀಕ ಕಮ್​ ಶಿಕ್ಷಕನಿಗೆ ಇಂಡೋನೇಷ್ಯಾ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಆರೋಪಿಯ ಹೆಸರು ಹೆರ್ರಿ ವಿರಾವನ್​ ಅಂತ. 11ರಿಂದ 16 ವರ್ಷದ ಮಕ್ಕಳೇ ಈತನ ಟಾರ್ಗೆಟ್​. 2016ರಿಂದ ಇದುವರೆಗೆ 13 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿರೋದು ಬೆಳಕಿಗೆ ಬಂದಿದೆ. ಈ 13 ವಿದ್ಯಾರ್ಥಿನಿಯರಲ್ಲಿ 8 ವಿದ್ಯಾರ್ಥಿನಿಯರು ಗರ್ಭಧಾರಣೆ ಮಾಡಿ, 9 ಮಕ್ಕಳಿಗೆ ಜನ್ಮ ಕೂಡ ಕೊಟ್ಟಿದ್ದಾರೆ ಅಂತ ವರದಿಯಾಗಿದೆ. 2016ರಿಂದ ಇಂಥಾ ನೀಚಕೃತ್ಯದಲ್ಲಿ ತೊಡಗಿದ್ರೂ ಪ್ರಕರಣ ಬೆಳಕಿಗೆ ಬಂದಿದ್ದು ಕಳೆದವರ್ಷ. ವಿದ್ಯಾರ್ಥಿನಿಯೊಬ್ಬಳು ಪ್ರೆಗ್ನೆಂಟ್​ ಆಗಿದ್ದನ್ನ ನೋಡಿ ಪೋಷಕರು ಪೊಲೀಸರಿಗೆ ದೂರು ಕೊಟ್ಟಿದ್ರು. ಬಳಿಕ ಪೊಲೀಸರು ಈತನ ಜನ್ಮ ಜಾಲಾಡಿದ್ದಾರೆ. ಈತನ ಅತ್ಯಾಚಾರ ಸ್ಟೋರಿ ಕೇಳಿ ಇಡೀ ಇಂಡೋನೇಷ್ಯಾ ಬೆಚ್ಚಿಬಿದ್ದಿದೆ. ಆರೋಪಿ ಶಿಕ್ಷಕನಿಗೆ ಮರಣದಂಡನೆ ನೀಡಬೇಕು, ಪುರುಷತ್ವ ಹರಣ ಮಾಡ್ಬೇಕು ಅನ್ನೋ ಕೂಗು ಕೇಳಿ ಬಂದಿದೆ. ಆದ್ರೆ ಕೋರ್ಟ್ ಜೀವಾವಾಧಿ ಜೈಲು ಶಿಕ್ಷೆ ವಿಧಿಸಿದೆ. ಅಂದ್ಹಾಗೆ ತನ್ನ ಶಾಲೆಗೆ ಮಕ್ಕಳನ್ನ ಆಕರ್ಷಿಸಲು ಈತ ಸ್ಕಾಲರ್​​ಶಿಪ್​ ಸೇರಿದಂತೆ ಇನ್ನಿತರ ಆಮಿಷಗಳನ್ನ ಒಡ್ಡುತ್ತಿದ್ದ ಅಂತಾನೂ ವರದಿಯಾಗಿದೆ. ಇಂಡೋನೇಷ್ಯಾದಲ್ಲಿ ಮಹಿಳೆರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರೋದ್ರಿಂದ ಅದನ್ನ ನಿರ್ಮೂಲನೆ ಮಾಡೋ ಬಿಲ್​ ಜಾರಿಗೆ ತರಬೇಕು ಅನ್ನೋ ಕೂಗು ಹಿಂದಿನಿಂದಲೂ ಕೇಳಿಬರ್ತಿದೆ. ಆದ್ರೆ ಬಿಲ್​​ನಲ್ಲಿರೋ ಕೆಲವೊಂದು ಅಂಶಗಳನ್ನ ಇಸ್ಲಾಮಿಕ್​ ಗ್ರೂಪ್ಸ್ ಮತ್ತು ಧಾರ್ಮಿಕ ಮುಖಂಡರು ವಿರೋಧಿಸುತ್ತಿದ್ದಾರೆ.

-masthmagaa.com

Contact Us for Advertisement

Leave a Reply