ಐಪಿಎಲ್-2020 ವೇಳಾಪಟ್ಟಿ ಪ್ರಕಟ: ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ

masthmagaa.com:

ಯುಎಇ: 2020ರ ಐಪಿಎಲ್ ವೇಳಾಪಟ್ಟಿ ಪ್ರಕಟವಾಗಿದೆ. ಸೆಪ್ಟೆಂಬರ್ 19ರಂದು ಅಬುದಾಬಿಯಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್​, ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ.

ಆರ್​ಸಿಬಿ ತಂಡದ ಮೊದಲ ಪಂದ್ಯ ಸೆಪ್ಟೆಂಬರ್ 21ರಂದು ನಡೆಯಲಿದೆ. ದುಬೈನಲ್ಲಿ ಸನ್​ ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಪಂದ್ಯ ಆರಂಭವಾಗಲಿದೆ.

ಉಳಿದಂತೆ ಸೆಪ್ಟೆಂಬರ್ 24ರಂದು ಪಂಜಾಬ್, ಸೆಪ್ಟೆಂಬರ್ 28ರಂದು ಮುಂಬೈ, ಅಕ್ಟೋಬರ್ 3ರಂದು ರಾಜಸ್ಥಾನ, ಅ. 5ರಂದು ದೆಹಲಿ, ಅ. 10ರಂದು ಚೆನ್ನೈ, ಅ.12ರಂದು ಕೋಲ್ಕತ್ತಾ, ಅ.15ರಂದು ಪಂಜಾಬ್, ಅ. 17ರಂದು ರಾಜಸ್ಥಾನ, ಅ.21ರಂದು ಕೋಲ್ಕತ್ತಾ, ಅ.25ರಂದು ಚೆನ್ನೈ, ಅ.28ರಂದು ಮುಂಬೈ, ಅ.31ರಂದು ಹೈದರಾಬಾದ್, ನವೆಂಬರ್ 2ರಂದು ದೆಹಲಿ ತಂಡಗಳನ್ನ ಕೊಹ್ಲಿ ನಾಯಕತ್ವದ ಆರ್​ಸಿಬಿ ಎದುರಿಸಲಿದೆ.

-masthmagaa.com

Contact Us for Advertisement

Leave a Reply