ಮುಂದಿನ ವರ್ಷ ಐಪಿಎಲ್​​ನಲ್ಲಿ 10 ತಂಡಗಳ ಆಟ!

masthmagaa.com:

ಮುಂದಿನ ವರ್ಷದಿಂದ ಐಪಿಎಲ್​ 8 ತಂಡಗಳ ಬದಲಾಗಿ 10 ತಂಡಗಳ ನಡುವೆ ನಡೆಯಲಿದೆ. ಹೊಸದಾಗಿ ಎರಡು ತಂಡಗಳನ್ನ ಸೇರಿಸಲು ಮುಂದಾಗಿರೋ ಬಿಸಿಸಿಐ, ತಂಡವನ್ನ ಖರೀದಿಸಲು ಟೆಂಡರ್​​ ಆಹ್ವಾನಿಸಿದೆ. ತಂಡವನ್ನ ಖರೀದಿಸಲು ಇಂಟರೆಸ್ಟ್ ಇರೋರು ಅಕ್ಟೋಬರ್​ 5ನೇ ತಾರೀಖಿನ ಒಳಗೆ 10 ಲಕ್ಷ ರೂಪಾಯಿ ಕೊಟ್ಟು ಇನ್ವಿಟೇಷನ್​ ಟು ಟೆಂಡರ್ ಪಡೀಬೇಕು. ಈ ಅಮೌಂಟ್ ರಿಫಂಡ್ ಆಗಲ್ಲ. ನಂತ್ರ ಅವರು ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಅಂದ್ಹಾಗೆ, ಅಹ್ಮದಾಬಾದ್​, ಲಖ್ನೌ, ಗುವಾಹಟಿ, ಕಟಕ್ ಸೇರಿದಂತೆ ಒಟ್ಟು 6 ನಗರಗಳು ಐಪಿಎಲ್​ಗೆ ಸೇರೋ ಈ ರೇಸ್​​ನಲ್ಲಿವೆ. ಸದ್ಯ ಎರಡಕ್ಕೆ ಮಾತ್ರ ಅವಕಾಶ ಸಿಗಲಿದೆ.

-masthmagaa.com

Contact Us for Advertisement

Leave a Reply