ಇರಾನ್​​​ನಲ್ಲಿ ಅಘೋಷಿತ ಪರಮಾಣು ಘಟಕಗಳ ಬಗ್ಗೆ ಆತಂಕ!

masthmagaa.com:

ಇರಾನ್ ತನ್ನ ಘೋಷಿಸಿಕೊಳ್ಳದ ಪರಮಾಣು ಚಟುವಟಿಕೆಗಳ ಬಗ್ಗೆ ಇನ್ನೂ ಕೂಡ ಮಾಹಿತಿ ನೀಡಿಲ್ಲ.. ಇರಾನ್ ಲಿಮಿಟ್​ಗಿಂತಲೂ 16 ಪಟ್ಟು ಜಾಸ್ತಿ ಯುರೇನಿಯಂ ದಾಸ್ತಾನು ಮಾಡಿಕೊಂಡಿದೆ ಅಂತ ಅಂತಾರಾಷ್ಟ್ರೀಯ ಅಟಾಮಿಕ್ ಎನರ್ಜಿ ಏಜೆನ್ಸಿ ಅಂದ್ರೆ IAEA ಆತಂಕ ವ್ಯಕ್ತಪಡಿಸಿದೆ. ಈ ಹಿಂದೆ ಫೆಬ್ರವರಿಯಲ್ಲಿ ಇರಾನ್ ಹಲವು ತಪಾಸಣೆಗಳಿಗೆ ತಡೆಯೊಡ್ಡಿತ್ತು. ಆದ್ರೆ ಕಳೆದ ವಾರವಷ್ಟೇ ಇರಾನ್ ಮತ್ತು ಐಎಇಎ ನಡುವೆ ಜೂನ್ 24ರವರೆಗಿನ ಅವಧಿಯ ಒಂದು ಒಪ್ಪಂದವಾಗಿದ್ದು, ಅದರಂತೆ ಹಲವು ತಪಾಸಣೆಗಳನ್ನು ಮುಂದುವರಿಸಲು ಅವಕಾಶ ಸಿಕ್ಕಿದೆ. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ IAEA ಮಹಾನಿರ್ದೇಶಕ ರಫಾಯೆಲ್​ ಗ್ರೋಸ್ಸಿ, ಇರಾನ್ ಜೊತೆಗಿನ ಮಾತುಕತೆ ನಿರೀಕ್ಷಿತ ಫಲ ನೀಡಿಲ್ಲ ಅಂತ ಆತಂಕ ವ್ಯಕ್ತಪಡಿಸಿದ್ಧಾರೆ. IAEA ತನಿಖೆಯಿಂದ ಇರಾನ್​​ನಲ್ಲಿ ಈವರೆಗೆ ಒಟ್ಟು 3 ಅಘೋಷಿತ ಪರಮಾಣು ಕೇಂದ್ರಗಳಿವೆ. 2000ನೇ ಇಸವಿಯಿಂದಲೇ ಇವುಗಳ ಕಾರ್ಯ ಕೂಡ ಶುರುವಾಗಿತ್ತು ಅಂತ ಗೊತ್ತಾಗಿದೆ. ಅದ್ರ ನಡುವೆಯೇ ಮತ್ತೊಂದು ಕಡೆ 2015ರಲ್ಲಿ ಮಾಡಿಕೊಂಡಿದ್ದ ಪರಮಾಣು ಒಪ್ಪಂದವನ್ನು ಮುಂದುವರಿಸಲು ಅಮೆರಿಕ ಸೇರಿದಂತೆ ಹಲವು ದೇಶಗಳು ಇರಾನ್ ಜೊತೆಗೆ ವಿಯೆನ್ನಾದಲ್ಲಿ ಮಾತುಕತೆ ನಡೆಸುತ್ತಲೇ ಇವೆ. ಅಂದಹಾಗೆ 2015ರಲ್ಲಿ ಬರಾಕ್ ಒಬಾಮಾ ಅಮೆರಿಕದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಇರಾನ್ ಜೊತೆಗೆ ಒಂದು ಒಪ್ಪಂದವಾಗಿತ್ತು. ಅದ್ರಲ್ಲಿ ಇರಾನ್ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿ, ದೇಶದ ಅಭಿವೃದ್ಧಿ ದೃಷ್ಟಿಯಿಂದ ಪರಮಾಣು ಅಭಿವೃದ್ಧಿಗೆ ಅನುಮತಿ ನೀಡಲಾಗಿತ್ತು. ಆದ್ರೆ 2018ರಲ್ಲಿ ಟ್ರಂಪ್ ಈ ಒಪ್ಪಂದದಿಂದ ಹೊರನಡೆದು, ಹಲವು ಮೊದಲಿದ್ದ ನಿರ್ಬಂಧಗಳನ್ನೇ ಹೇರಿದ್ರು. ಇದೀಗ ಬೈಡೆನ್ ಸರ್ಕಾರ ಮತ್ತು ಇರಾನ್​ನ್ನು ಮತ್ತೆ ಆ ಒಪ್ಪಂದದೊಳಗೆ ತರಲು ಯತ್ನಿಸ್ತಿದೆ.

-masthmagaa.com

Contact Us for Advertisement

Leave a Reply