ಕೊರೋನಾ ಭೀತಿ, 54 ಸಾವಿರ ಕೈದಿಗಳನ್ನ ಬಿಡುಗಡೆ ಮಾಡಿದ ಇರಾನ್​

masthmagaa.com:

ಭಾರತ ಸೇರಿದಂತೆ ಜಗತ್ತಿನೆಲ್ಲೆಡೆ ಆತಂಕ ಸೃಷ್ಟಿಸಿರೋ ಕೊರೋನಾ ವೈರಸ್​ ಇದುವರೆಗೆ 3,000ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಮಹಾಮಾರಿ ಹರಡದಂತೆ ತಡೆಯಲು ಎಲ್ಲಾ ದೇಶಗಳು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿವೆ. ಅದರಲ್ಲೂ ಒಂದು ಹೆಜ್ಜೆ ಮುಂದೆ ಹೋಗಿರುವ ಇರಾನ್​, ದೇಶದಾದ್ಯಂತ ವಿವಿಧ ಜೈಲಿನಲ್ಲಿರುವ ಸುಮಾರು 54 ಸಾವಿರ ಕೈದಿಗಳನ್ನು ತಾತ್ಕಾಲಿಕವಾಗಿ ಬಿಡುಗಡೆ ಮಾಡಿದೆ.

ಚೀನಾವನ್ನು ಹೊರತುಪಡಿಸಿದರೆ ಇರಾನ್​ನಲ್ಲಿ ಕೊರೋನಾ ವೈರಸ್​ಗೆ ಅತಿ ಹೆಚ್ಚು ಜನ ಬಲಿಯಾಗಿದ್ದಾರೆ. ಇದುವರೆಗೆ 77 ಜನ ಮೃತಪಟ್ಟಿದ್ದು, 2,300ಕ್ಕೂ ಹೆಚ್ಚು ಜನರಲ್ಲಿ ವೈರಸ್ ಪತ್ತೆಯಾಗಿದೆ. ಜೊತೆಗೆ ಇರಾನ್​ನಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಓರ್ವ ಸಿಬ್ಬಂದಿಯಲ್ಲೂ ಸೋಂಕು ಪತ್ತೆಯಾಗಿದೆ.

ಇನ್ನು ಜಪಾನ್​ನಲ್ಲಿ ವೈರಸ್​ ಹರಡದಂತೆ ಮಾಡಲು ದೇಸಿ ವಿಮಾನಗಳ ಹಾರಾಟವನ್ನ ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಜಪಾನ್ ಏರ್​ಲೈನ್ಸ್​ ಹಾಗೂ ಆಲ್​ ನಿಪ್ಪೋನ್ ಏರ್​ವೇಸ್​ ಕಂಪನಿಗಳು ಮಾರ್ಚ್​ 6ರಿಂದ 12ರವರೆಗೆ ದೇಸಿ ವಿಮಾನಗಳ ಹಾರಾಟ ಕಡಿಮೆ ಮಾಡುವುದಾಗಿ ಹೇಳಿದೆ. ಜಪಾನ್​ನಲ್ಲಿ ಇದುವರೆಗೆ 1,000ಕ್ಕೂ ಹೆಚ್ಚು ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ.

-masthmagaa.com

Contact Us for Advertisement

Leave a Reply