ಅಮೆರಿಕಾ VS ಇರಾನ್..! ಯಾರು ಶಕ್ತಿಶಾಲಿ..? ಯುದ್ಧ ನಡೆದ್ರೆ ಗೆಲ್ಲೋದ್ಯಾರು..?

ಹಾಯ್ ಫ್ರೆಂಡ್ಸ್,

ಇರಾನ್ ಅಮೆರಿಕ ಯುದ್ಧ ಆದರೆ ಯಾರು ಗೆಲ್ಲುತ್ತಾರೆ? ಯಾವ ದೇಶದ ಶಕ್ತಿ ಎಷ್ಟು? ಈ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ. ಅದಕ್ಕೆ ಕಾರಣ ಅಮೆರಿಕ ಇರಾನ್ ನಡುವಿನ ಸಂಘರ್ಷದಿಂದ ಸೃಷ್ಟಿಯಾಗಿರುವ ಯುದ್ಧದ ವಾತಾವರಣ. ಬನ್ನಿ ಹಾಗಾದ್ರೆ ಅಮೆರಿಕ ಇರಾನ್ ಈ ಇಬ್ಬರಲ್ಲಿ ಯಾರು ಹೆಚ್ಚು ಶಕ್ತಿಶಾಲಿ. ಅಮೆರಿಕದ ಶಕ್ತಿಯೇನು. ಇರಾನ್ ನ ಸೀಕ್ರೆಟ್ ಶಕ್ತಿಯೇನು.? ಚಿಕ್ಕ ದೇಶವಾಗಿದ್ದರು ಅಮೆರಿಕಗೆ ಇರಾನ್ ನ ಮಿಸೈಲ್ ಗಳು ಹೇಗೆಲ್ಲಾ ಗಾಯ ಮಾಡುತ್ತವೆ..? ಯುದ್ಧ ನಡೆದರೆ ಯಾವ ದೇಶಗಳು ಅಮೆರಿಕ ಪರ ನಿಲ್ಲುತ್ತವೆ..? ಯಾವ ದೇಶಗಳು ಇರಾನ್ ಪರ ಯುದ್ಧಕ್ಕೆ ಇಳಿಯುತ್ತವೆ..? ನಮ್ಮ ದೇಶ ಅಮೆರಿಕ ಪರನೋ, ಇರಾನ್ ಪರಾನೋ..? ಎಲ್ಲವನ್ನ ನೋಡ್ತಾ ಹೋಗೋಣ.

ಫ್ರೆಂಡ್ಸ್, ವಿಶ್ವದ ದೊಡ್ಡಣ್ಣ ಅಂತ ಕರೆಸಿಕೊಳ್ಳೋ ಅಮೆರಿಕ ಹೆಸರಿಗೆ ತಕ್ಕಂತೆ ವಿಶ್ವದಲ್ಲಿ ಅತ್ಯಂತ ಬಲಿಷ್ಟ ಸೇನೆಯನ್ನು ಹೊಂದಿದೆ. ಹೀಗಾಗಿಯೇ ಯಾವ ದೇಶ ಕೂಡ ಅಮೆರಿಕ ಜೊತೆ ಗುದ್ದಾಡಲು ಹಿಂದೇಟು ಹಾಕುತ್ತೆ. ಅಷ್ಟು ಪವರ್ಫುಲ್ ಆಗಿದೆ ಅಮೆರಿಕ ಮಿಲಿಟರಿ. ಮತ್ತೊಂದು ಕಡೆ ಇರಾನ್ ಕೂಡ ಬಲಿಷ್ಠವಾಗಿದ್ರೂ ಅಮೆರಿಕ ಜೊತೆ ಹೋಲಿಕೆ ಮಾಡುವುದು ಕಷ್ಟ. ಹಾಗಾದ್ರೆ ಅಮೆರಿಕ ಮತ್ತು ಇರಾನ್ ನ ಬಲಾಬಲವೇನು..? ಯಾರ ಸ್ಟ್ರೆಂತ್ ಏನು..? ಯಾರ ವೀಕ್ನೆಸ್ ಏನು ನೋಡೋಣ ಬನ್ನಿ.

ಫ್ರೆಂಡ್ಸ್, ಭೂಸೇನೆ ವಿಚಾರಕ್ಕೆ ಬಂದರೆ, ಅಮೆರಿಕ ಬಳಿ ಬರೋಬ್ಬರಿ 12 ಲಕ್ಷದ 81 ಸಾವಿರ ಸಕ್ರಿಯ ಸೈನಿಕರು ಇದ್ದಾರೆ.. ಇರಾನ್ ಬಳಿ ಅರ್ಧಕ್ಕೂ ಕಮ್ಮಿ ಅಂದ್ರೆ 5 ಲಕ್ಷದ 50 ಸಾವಿರ ಯೋಧರು ಇದ್ದಾರೆ. ಮೀಸಲು ಸೈನಿಕರ ವಿಚಾರದಲ್ಲೂ ಅಷ್ಟೇ, ಅಮೆರಿಕ ಬಳಿ 8 ಲಕ್ಷಕ್ಕೂ ಹೆಚ್ಚು ಮೀಸಲು ಸೈನಿಕರಿದ್ದಾರೆ. ಇರಾನ್ ಬಳಿ ಇರುವ ಮೀಸಲು ಸೈನಿಕರ ಸಂಖ್ಯೆ ಮೂರುವರೆ ಲಕ್ಷ ಅಷ್ಟೇ. ಹೀಗೆ ಮಿಲಿಟರಿ, ಪ್ಯಾರಾ ಮಿಲಿಟರಿ, ಪೊಲೀಸ್ ಎಲ್ಲರನ್ನೂ ಸೇರಿಸಿದ್ರೆ ಅಮೆರಿಕ ಹತ್ತಿರ ಬರೋಬ್ಬರಿ 7 ಕೋಟಿಗೂ ಹೆಚ್ಚು ಯೋಧರಿದ್ದಾರೆ. ಇರಾನ್ ಬಳಿ ಇರುವುದು ಎರಡು ಕೋಟಿಯಷ್ಟು ಯೋಧರು ಮಾತ್ರ. ಇನ್ನು ಅಮೆರಿಕ ಹತ್ತಿರ ಆರು ಸಾವಿರಕ್ಕೂ ಹೆಚ್ಚು ಟ್ಯಾಂಕರ್​​​ಗಳು ಇದ್ದರೆ, ಇರಾನ್ ಹತ್ತಿರ 2,500 ಟ್ಯಾಂಕರ್ ಗಳಿವೆ. ಯುಎಸ್ಎ ಬಳಿ 41 ಸಾವಿರಕ್ಕೂ ಹೆಚ್ಚು ಶಸ್ತ್ರಸಜ್ಜಿತ ವಾಹನಗಳು ಇದ್ದರೆ, ಇರಾನ್ ಬಳಿ ಒಂದುವರೆ ಸಾವಿರ ವಾಹನಗಳಿವೆ. ಇನ್ನು ಫಿರಂಗಿಗಳನ್ನು ನೋಡಿದ್ರೆ 2 ದೇಶಗಳ ಬಳಿಯೂ 4 ಸಾವಿರಕ್ಕೂ ಹೆಚ್ಚು ಫಿರಂಗಿಗಳಿವೆ. ರಾಕೆಟ್ ಲಾಂಚರ್ ಗಳ ವಿಚಾರದಲ್ಲಿ ಇರಾನ್ ಅಮೇರಿಕಾಗಿಂತ ಹೆಚ್ಚು ರಾಕೆಟ್ ಲಾಂಚರ್ ಗಳನ್ನ ಹೊಂದಿದೆ. ಅಮೆರಿಕ ಹತ್ತಿರ ಸಾವಿರದ ಇನ್ನೂರು ರಾಕೆಟ್ ಲಾಂಚರ್ ಗಳಿದ್ದರೆ, ಇರಾನ್ ಸಾವಿರದ ನಾನೂರು ರಾಕೆಟ್ ಲಾಂಚರ್ ಗಳನ್ನ ಹೊಂದಿದೆ.

ಇನ್ನು ವಾಯುಸೇನೆ ನೋಡುವುದಾದರೆ, ಅಮೆರಿಕ 12 ಸಾವಿರಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಹೊಂದಿದೆ. ಇರಾನ್ ಬಳಿ ಇರುವುದು ಬರೀ 850 ಯುದ್ಧ ವಿಮಾನಗಳು. ಫೈಟರ್ ಜೆಟ್ ವಿಚಾರದಲ್ಲಿ ಅಮೆರಿಕವೆ ಮುಂದಿದೆ. ಯುಎಸ್ಎ ಹತ್ತಿರ 457 ಫೈಟರ್ ಜೆಟ್ ಗಳು ಇದ್ದರೆ, ಇರಾನ್ ಕೇವಲ 130 ಫೈಟರ್ ಜೆಟ್ ಗಳನ್ನು ಹೊಂದಿದೆ. ಹೆಲಿಕಾಪ್ಟರ್ ವಿಚಾರದಲ್ಲೂ ಅಷ್ಟೇ ಅಮೆರಿಕ ಐದು ಸಾವಿರಕ್ಕೂ ಹೆಚ್ಚು ಹೆಲಿಕಾಪ್ಟರ್ ಗಲನ್ನ ಹೊಂದಿದೆ. ಇರಾನ್ ಹತ್ತಿರ ಇರುವುದು ಜಸ್ಟ್ 324 ಹೆಲಿಕಾಪ್ಟರ್ ಮಾತ್ರ. ಅಮೆರಿಕ 12 ಖಂಡಾಂತರ ಕ್ಷಿಪಣಿ ಅಥವಾ ಬ್ಯಾಲೆಸ್ಟಿಕ್ ಮಿಸೈಲ್ ಹೊಂದಿದ್ರೆ, ಇರಾನ್ 7 ಬಗೆಯ ಕ್ಷಿಪಣಿಗಳನ್ನ ಹೊಂದಿದೆ.

ಇನ್ನು ನೌಕಾಪಡೆ ನೋಡ್ತಾ ಹೋದ್ರೆ, ಅಮೆರಿಕ ಹತ್ತಿರ 437 ಕು ಹೆಚ್ಚು ಯುದ್ಧ ನೌಕೆಗಳಿದ್ದರೆ, ಇರಾನ್ ಬಳಿ 406 ಯುದ್ಧ ಹಡಗುಗಳು ಇವೆ. ಅಮೆರಿಕ 20 ವಿಮಾನ ವಾಹಕ ಯುದ್ಧ ನೌಕೆ ಗಳನ್ನ ಹೊಂದಿದ್ದರೆ, ಇರಾನ್ ಒಂದೇ ಒಂದು ವಿಮಾನ ವಾಹಕ ಯುದ್ಧ ನೌಕೆ ಹೊಂದಿಲ್ಲ. ಇನ್ನು ಅಮೆರಿಕ ಹತ್ತಿರ 71 ಸಬ್ ಮರೀನ್ ಗಳು ಇದ್ದರೆ, ಇರಾನ್ ಬಳಿ 40 ಸಬ್ ಮರೀನ್ ಗಳಿವೆ. ಇವೆಲ್ಲಕ್ಕಿಂತ ಹೆಚ್ಚಾಗಿ ಅಮೆರಿಕ ಅಣ್ವಸ್ತ್ರ ಹೊಂದಿರೋ ದೇಶ. ಆದ್ರೆ ಇರಾನ್ ಹತ್ತಿರ ಅಣ್ವಸ್ತ್ರ ಇಲ್ಲ. ಹಲವು ವರ್ಷಗಳಿಂದ ಅಣ್ವಸ್ತ್ರ ಪರೀಕ್ಷೆಗಳನ್ನು ನಡೆಸುತ್ತಿರೋ ಇರಾನ್ ಅದನ್ನ ಹೊಂದಲು ಪ್ರಯತ್ನಿಸುತ್ತಿದೆ.

ಇನ್ನು ಅಮೆರಿಕಾದ ಮಿಲಿಟರಿ ಬಜೆಟ್ 610 ಬಿಲಿಯನ್ ಡಾಲರ್ ಇದೆ. ಅಂದ್ರೆ ನಮ್ಮ ರೂಪಾಯಿ ಲೆಕ್ಕದಲ್ಲಿ ಹೇಳಬೇಕು ಅಂದ್ರೆ 42 ಲಕ್ಷ ಕೋಟಿ. ಇರಾನ್ ನ ಮಿಲಿಟರಿ ಬಜೆಟ್ ಜಸ್ಟ್ 14 ಬಿಲಿಯನ್ ಡಾಲರ್ ಅಂದ್ರೆ 1 ಲಕ್ಷ ಕೋಟಿ ರೂಪಾಯಿ ಅಷ್ಟೇ. ಮಿಲಿಟರಿ ರ್ಯಾಂಕಿಂಗ್ನಲ್ಲಿ ಅಮೇರಿಕ ನಂಬರ್ ಒನ್ ಸ್ಥಾನದಲ್ಲಿದ್ದರೆ, ಇರಾನ್ 14ನೇ ಸ್ಥಾನದಲ್ಲಿದೆ.

ಇದನ್ನೆಲ್ಲಾ ನೋಡ್ತಿದ್ರೆ ಅಮೆರಿಕಗಿಂತ ಇರಾನ್ ತುಂಬಾ ವೀಕ್ ಅನ್ಸುತ್ತೆ. ಆದ್ರೆ ಇರಾನ್ ನನ್ನ ಅಷ್ಟು ಈಸಿಯಾಗಿ ತೆಗೆದುಕೊಳ್ಳುವಂತಿಲ್ಲ. ಯಾಕಂತ ಹೇಳ್ತೀವಿ ನೋಡಿ. ಇರಾನ್ ತನ್ನ ನೆರೆಹೊರೆಯ ದೇಶಗಳಲ್ಲಿ ಪ್ರಾಕ್ಸಿಗಳಿಗೆ ಹಣಕಾಸಿನ ನೆರವು ಹಾಗೂ ಮಿಸೈಲ್ ಗಳನ್ನ ಕೊಟ್ಟು ಬೆಳೆಸುತ್ತಿದೆ. ಇವರೆಲ್ಲ ಹೊರದೇಶದಲ್ಲಿ ಇದ್ದುಕೊಂಡೇ ಇರಾನ್ ಪರ ಹೋರಾಡುತ್ತಾರೆ. ಯೆಮೆನ್ ನಲ್ಲಿ ಹೌತಿ ಬಂಡುಕೋರರಿಗೆ ಆರ್ಥಿಕ ನೆರವು ಕೊಡ್ತೀರೋ ಇರಾನ್ ಅವರನ್ನ ಸೌದಿ ಮತ್ತು ಅಮೆರಿಕ ವಿರುದ್ಧ ಎತ್ತಿಕಟ್ಟುತ್ತಿದೆ. ಅದೇ ರೀತಿ ಲೆಬನಾನ್ ನಲ್ಲಿ ಹೆಜ್ಬುಲ್ಲಾ ಸಂಘಟನೆ, ಗಾಜಾ ಪಟ್ಟಿಯಲ್ಲಿ ಹಮಾಸ್ ಉಗ್ರರು, ಇರಾಕ್ನಲ್ಲಿ ಶಿಯಾ ಉಗ್ರರನ್ನ ಪೋಷಿಸುತ್ತಿದೆ. ಇನ್ನು ಆಫ್ಘಾನಿಸ್ತಾನದಲ್ಲಿ ಅಮೆರಿಕ ವಿರುದ್ಧ ತಾಲಿಬಾನ್ ಉಗ್ರರಿಗೆ ಇರಾನ್ ಬೆಂಬಲ ನೀಡುತ್ತಿದೆ ಅಂತ ಹೇಳಲಾಗುತ್ತಿದೆ. ಇನ್ನು ಇರಾನ್ ನ ದಕ್ಷಿಣ ಭಾಗದಲ್ಲಿರುವ ಹೋರ್ಮುಜ್ ಜಲಸಂಧಿ ತೈಲ ಸಾಗಣೆಯ ಪ್ರಮುಖ ಜಲಮಾರ್ಗ. ಸುಮಾರು 38 ಕಿಲೋಮೀಟರ್ ಅಗಲವಿರುವ ಈ ಜಲಸಂಧಿಯನ್ನ ಇರಾನ್ ಒಂದು ವೇಳೆ ಬಂದ್ ಮಾಡಿದ್ರೆ ಜಗತ್ತಿನಲ್ಲಿ ಪೆಟ್ರೋಲಿಯಂ ಬೆಲೆ ಹೆಚ್ಚುಕಮ್ಮಿ ಡಬಲ್ ಆಗುತ್ತೆ. ಇನ್ನು ಅಮೆರಿಕ ವಿರುದ್ಧ ಇರಾನ್ ಸೈಬರ್ ದಾಳಿ ನಡೆಸುವ ಸಾಧ್ಯತೆಯನ್ನ ಕೂಡ ತಳ್ಳಿಹಾಕುವಂತಿಲ್ಲ.

ಫ್ರೆಂಡ್ಸ್ ಒಂದು ವೇಳೆ 3ನೇ ಮಹಾಯುದ್ಧ ನಡೆದಿದ್ದೇ ಆದರೆ ವಿಶ್ವದ ಬಲಿಷ್ಠ ರಾಷ್ಟ್ರಗಳಾದ ರಷ್ಯಾ ಮತ್ತು ಚೀನಾ ಯಾರ ಪರವಾಗಿ ಯುದ್ಧಕ್ಕೆ ಇಳಿಯುತ್ತವೆ ಅನ್ನೋದು ತುಂಬಾ ಇಂಪಾರ್ಟೆಂಟ್ ಆಗುತ್ತೆ. ಹೇಳಿಕೇಳಿ ಅಮೆರಿಕ ಕಂಡರೆ ರಷ್ಯಾಗೆ ಆಗಿಬರಲ್ಲ. ಚೀನಾ ಕೂಡ ಅಷ್ಟೇ. ಹೀಗಾಗಿ ಎರಡು ದೇಶಗಳು ಇರಾನ್ ಗೆ ಬೆಂಬಲ ನೀಡಿದರೆ ಅಮೆರಿಕ ದೊಡ್ಡ ಹೊಡೆತ ತಿನ್ನುವುದು ಗ್ಯಾರಂಟಿ. ಇನ್ನು ನಮ್ಮ ದೇಶದ ವಿಚಾರಕ್ಕೆ ಬಂದರೆ. ಅಮೆರಿಕ ಜೊತೆ ಭಾರತ ಉತ್ತಮ ಸಂಬಂಧ ಹೊಂದಿದೆ. ಅಟ್ ದೀ ಸೇಮ್ ಟೈಮ್ ಇರಾನ್ ನಿಂದ ನಮಗೆ ಕಮ್ಮಿ ಬೆಲೆ ಯಲ್ಲಿ ಕಚ್ಚಾತೈಲ ಕೂಡ ಸಿಗುತ್ತಿದೆ. ಹೀಗಾಗಿ ಯುದ್ದ ನಡೆದರೆ ಭಾರತ ಅಮೆರಿಕಕ್ಕೂ ಸಪೋರ್ಟ್ ಮಾಡದೆ, ಇರಾನ್ ಪರವಾಗಿಯೂ ನಿಲ್ಲದೆ ತಟಸ್ಥವಾಗಿ ಉಳಿಯುವ ಸಾಧ್ಯತೆಯೇ ಹೆಚ್ಚಾಗಿದೆ.

Contact Us for Advertisement

Leave a Reply