ಇನ್ಮುಂದೆ ಸಿಗಲ್ಲ ಲೆಜೆಂಡರಿ ರೆನಾಲ್ಡ್ಸ್‌ ಪೆನ್! ಕಂಪನಿ ಹೇಳಿದ್ದೇನು?

masthmagaa.com:

ರೆನಾಲ್ಡ್ಸ್‌ ಕಂಪನಿಯ ಜನಪ್ರಿಯ ಬಾಲ್‌ ಪೆನ್‌ ‘Reynolds 045’ ಉತ್ಪಾದನೆಯನ್ನು ನಿಲ್ಲಿಸಲಾಗಿದೆ ಇನ್ಮುಂದೆ ಮಾರ್ಕೆಟ್‌ನಲ್ಲಿ ಸಿಗೋದಿಲ್ಲ ಅನ್ನೋ ಪೋಸ್ಟ್‌ ಒಂದು ವೈರಲ್‌ ಆಗಿದೆ. X ಬಳಕೆದಾರರೊಬ್ಬರು ರೆನಾಲ್ಡ್ಸ್‌ ಕಂಪನಿ ತನ್ನ ಐಕಾನಿಕ್‌ ಬಾಲ್‌ ಪಾಯಿಂಟ್‌ ಪೆನ್‌ ತಯಾರಿಕೆಯನ್ನ ನಿಲ್ಲಿಸುತ್ತಿದೆ. ‘Reynolds 045 Fine Carbure’ ಇನ್ನು ಮುಂದೆ ಮಾರುಕಟ್ಟೆಯಲ್ಲಿ ಸಿಗೋದಿಲ್ಲ, ಒಂದು ಯುಗದ ಅಂತ್ಯ.. ಅಂತ ಬರೆದುಕೊಂಡಿದ್ದಾರೆ. ಈ ಪೋಸ್ಟ್‌ ಸಖತ್‌ ವೈರಲ್‌ ಆಗಿದ್ದು, ಹಲವರು ತಮ್ಮ ಬಾಲ್ಯವನ್ನ ನೆನಪಿಸಿಕೊಂಡು ಇನ್ಮೇಲೆ ಈ ಪೆನ್‌ ಸಿಗೋದಿಲ್ವ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಆದ್ರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ರೆನಾಲ್ಸ್ಡ್‌ ಕಂಪನಿ, ಸೋಷಿಯಲ್‌ ಮೀಡಿಯಾದಲ್ಲಿ ಸುಳ್ಳು ಸುದ್ಧಿಯನ್ನ ಸ್ಪ್ರೆಡ್‌ ಮಾಡಲಾಗ್ತಿದೆ. ನಾವು ಭಾರತದಲ್ಲಿ ಉತ್ತಮ ಭವಿಷ್ಯ ಹೊಂದಿದ್ದು, ನಮ್ಮ ಬ್ಯುಸಿನೆಸ್‌ನ್ನ ಎಕ್ಸ್‌ಪ್ಯಾಂಡ್‌ ಮಾಡುವ ಪ್ಲಾನ್‌ ಹೊಂದಿದ್ದೇವೆ. ಹೀಗಾಗಿ ಯಾವುದೇ ಮಾಹಿತಿಗಾಗಿ ದಯವಿಟ್ಟು ನಮ್ಮ ಅಧಿಕೃತ ವೆಬ್‌ಸೈಟ್‌ನ್ನ ಫಾಲೋ ಮಾಡಿ ಅಂತ ಹೇಳಿದೆ.

-masthmagaa.com

Contact Us for Advertisement

Leave a Reply