ಶುಕ್ರಗ್ರಹದಲ್ಲಿ ಆಮ್ಲಜನಕ ಇದೆಯಾ? ಪತ್ತೆ ಹಚ್ಚಲಿದೆ ನಾಸಾದ ಉಪಗ್ರಹ!

masthmagaa.com:

ಶುಕ್ರನನ್ನ ಭೂಮಿಯ ಅವಳಿ ಅಥವಾ ಅನುಜಾತ ಗ್ರಹ ಎನ್ನಲಾಗುತ್ತೆ. ಯಾಕಂದ್ರೆ ಗಾತ್ರದಲ್ಲಿ ಮತ್ತು ಸಾಂದ್ರತೆಯಲ್ಲಿ ಹೆಚ್ಚೂ ಕಡಿಮೆ ಭೂಮಿಯಷ್ಟೇ ಇದೆ. ಸೋಲಾರ್‌ ಸಿಸ್ಟಮ್‌ ಅಥವಾ ಈ ನಮ್ಮ ಸೌರ ಮಂಡಲದಲ್ಲಿ ಶುಕ್ರ, ಸೂರ್ಯನಿಂದ ಅತಿ ಹತ್ತಿರ ಇರುವ ಎರಡನೇ ಗ್ರಹ ಆಗಿದೆ. ಭೂಮಿ ಮತ್ತು ಶುಕ್ರ ಎರಡೂ ಗ್ರಹದ ಹುಟ್ಟು ಒಂದೇ ರೀತಿ ಆಗಿರಬಹುದು ಅಂತ ಹೇಳಲಾಗುತ್ತೆ. ಅಂತಹ ಶುಕ್ರಗ್ರಹದ ಬಗ್ಗೆ ತಿಳಿಯಲು ನಾಸಾ ಈಗ ಯೋಜನೆಯೊಂದನ್ನ ಹಾಕಿಕೊಂಡಿದೆ. ಇಟಲಿಯ ಖ್ಯಾತ ಚಿತ್ರಕಾರ ಮತ್ತು ವಿಜ್ಞಾನಿ ಲಿಯೊನಾರ್ಡ್‌ ಡಾ ವಿನ್ಸಿ ಅವ್ರ ಪ್ರೇರಣೆಯಲ್ಲಿ ಇದಕ್ಕೆ ಡಾವಿನ್ಸಿ ಮಿಷನ್‌ ಅಂತ ಹೆಸರಿಡಲಾಗಿದೆ. 2029ರಲ್ಲಿ ಇದು ಲಾಂಚ್‌ ಆಗಲಿದ್ದು, ಶುಕ್ರ ಗ್ರಹದ ರಾಸಾಯನಿಕ ರಚನೆ ಮತ್ತು ಅಲ್ಲಿ ಮನುಷ್ಯರು ವಾಸಯೋಗ್ಯ ಪರಿಸ್ಥಿತಿ ಇದೆಯಾ ಅಂತ ಪತ್ತೆ ಮಾಡಲಿದೆ. ಇದ್ರಿಂದ ಭೂಮಿಯ ಉಗಮದ ಬಗ್ಗೆ ಕೂಡ ಇನ್ನ ನಿಖರವಾಗಿ ಗೊತ್ತಾಗಲಿದೆ ಅಂತ ಹೇಳಲಾಗಿದೆ. ಶುಕ್ರಗ್ರಹದ ವಾತಾವರಣದಲ್ಲಿ ಇಳಿಯೋ ಈ ಉಪಗ್ರಹ ಹಂತ ಹಂತವಾಗಿ ಅಲ್ಲಿನ ವಸ್ತುಸ್ಥಿತಿಯನ್ನ ಅಧ್ಯಯನ ಮಾಡಲಿದೆ. ಒಂದು ರೀತಿ ಚಲಿಸುವ ಕೆಮಿಕಲ್‌ ಲ್ಯಾಬೋರೇಟರಿ ಥರ ಇರಲಿದೆ ಎನ್ನಲಾಗಿದೆ. ಜೊತೆಗೆ ಶುಕ್ರನಲ್ಲಿ ಎಷ್ಟು ಪ್ರಮಾಣದ ಆಮ್ಲಜನಕ ಇದೆ ಅನ್ನೋದನ್ನ ಕೂಡ ಪತ್ತೆ ಮಾಡಲಿದೆ. 2029ರಲ್ಲಿ ರಾಕೆಟ್‌ ಉಡಾವಣೆಯಾಗಲಿದ್ದು, 2031ಕ್ಕೆ ಇದು ಶುಕ್ರನ ವಾತವರಣವನ್ನ ಪ್ರವೇಶ ಮಾಡಲಿದೆ.

-masthmagaa.com

Contact Us for Advertisement

Leave a Reply