ಶುರುವಾಗುತ್ತಾ ಇಸ್ರೇಲ್-ಪ್ಯಾಲೆಸ್ತೇನ್ ಫ್ರೆಂಡ್​ಶಿಪ್​..?

masthmagaa.com:

ಇಸ್ರೇಲ್​​ನಲ್ಲಿ ಹೊಸ ಸರ್ಕಾರ ಬಂದ ಬೆನ್ನಲ್ಲೇ ಮುಸ್ಲಿಂ ರಾಷ್ಟ್ರಗಳ ಜೊತೆಗಿನ ಸಂಬಂಧವನ್ನು ಸುಧಾರಿಸಿಕೊಳ್ಳಲು ಒಂದೊಂದೇ ಹೆಜ್ಜೆ ಇಡ್ತಾನೇ ಇದೆ. ಅದ್ರ ಭಾಗವಾಗಿಯೇ ಈಗ ಪಕ್ಕದ ಪ್ಯಾಲೆಸ್ತೇನ್​​​ನ ಅಧ್ಯಕ್ಷ ಮಹ್ಮೌದ್ ಅಬ್ಬಾಸ್ ಜೊತೆ ಇಸ್ರೇಲ್ ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಜ್​ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಗ್ಯಾಂಟ್ಜ್​​​ ಕಚೇರಿ ಪ್ರಕಟಣೆ ಹೊರಡಿಸಿದ್ದು, ಮಾತುಕತೆ ವೇಳೆ ಇಬ್ಬರೂ ಉಭಯದೇಶಗಳ ನಡುವೆ ನಂಬಿಕೆ ಸ್ಥಾಪಿಸುವ ಹೆಜ್ಜೆ ಇಡ್ಬೇಕು ಅಂತ ಮಾತಾಡ್ಕೊಂಡಿದ್ದಾರೆ. ಇದ್ರಿಂದ ಉಭಯದೇಶಗಳಿಗೂ ಆರ್ಥಿಕ ಮತ್ತು ಭದ್ರತೆ ಕ್ಷೇತ್ರದಲ್ಲಿ ಲಾಭವಾಗಲಿದೆ. ಬೆನ್ನಿ ಗ್ಯಾಂಟ್ಜ್​ ಪ್ಯಾಲೆಸ್ತೇನ್ ಅಧ್ಯಕ್ಷ ಮಹ್ಮೌದ್ ಅಬ್ಬಾಸ್​​​ಗೆ ಬಕ್ರೀದ್ ಶಭಾಶಯ ಕೂಡ ಕೋರಿದ್ದಾರೆ ಅಂತ ತಿಳಿಸಿದೆ. ಈ ಮಾತುಕತೆ ಬಗ್ಗೆ ಪ್ಯಾಲೆಸ್ತೇನ್ ಅಥಾರಿಟಿ ಕೂಡ ಖಚಿತಪಡಿಸಿದೆ. ಆದ್ರೆ ಏನೇನ್ ಮಾತುಕತೆ ನಡೀತು ಅಂತ ಮಾಹಿತಿ ಕೊಟ್ಟಿಲ್ಲ. ಇನ್ನು ಇತ್ತೀಚಿಗಷ್ಟೇ ಯುಎಇನಲ್ಲಿ ಇಸ್ರೇಲ್ ರಾಯಬಾರಿ ಕಚೇರಿ ಓಪನ್ ಆಗಿತ್ತು. ಅದೇ ರೀತಿ ಇಸ್ರೇಲ್​​ನಲ್ಲೂ ಯುಎಇ ರಾಯಭಾರಿ ಕಚೇರಿ ಓಪನ್ ಆಗಿತ್ತು. ಇನ್ನು ನಿನ್ನೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಜೋರ್ಡಾನ್ ರಾಜ 2ನೇ ಕಿಂಗ್ ಅಬ್ದುಲ್ಲಾ ಭೇಟಿಯಾಗಿ ಹಲವು ಮಹತ್ವದ ವಿಚಾರಗಳ ಕುರಿತು ಚರ್ಚಿಸಿದ್ದಾರೆ.

-masthmagaa.com

Contact Us for Advertisement

Leave a Reply