ಇಸ್ರೇಲ್‌ನಲ್ಲಿ 2 ವರ್ಷದಲ್ಲಿ 4ನೇ ಬಾರಿಗೆ ಚುನಾವಣೆ!

masthmagaa.com:

ಇಸ್ರೇಲ್​ನಲ್ಲಿ 2 ವರ್ಷಗಳಲ್ಲಿ 4ನೇ ಬಾರಿಗೆ ಚುನಾವಣೆ ನಡೆಯುತ್ತಿದ್ದು, ಮತದಾನ ಪ್ರಕ್ರಿಯೆ ಆರಂಭವಾಗಿದೆ. ಈ ಚುನಾವಣೆಯಲ್ಲಿ ಬೆಂಜಮಿನ್ ನೆತಾನ್ಯಹು ಅಧಿಕಾರದಲ್ಲಿ ಮುಂದುವರಿಯುತ್ತಾರಾ ಇಲ್ವಾ ಅನ್ನೋದು ಗೊತ್ತಾಗಲಿದೆ. ಬೆಂಜಮಿನ್ ನೆತಾನ್ಯಹು ಈಗಾಗಲೇ ಇಸ್ರೇಲ್ ಪ್ರಧಾನ ಮಂತ್ರಿಯಾಗಿ 12 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ.

ಇವ್ರು ಎಷ್ಟರ ಮಟ್ಟಿಗೆ ಫೇಮಸ್ ಅಂದ್ರೆ ಇಸ್ರೇಲ್ ಕಾಪಾಡಬೇಕಾದ್ರೆ ಇವರನ್ನೇ ಆಯ್ಕೆ ಮಾಡಬೇಕು ಅನ್ನೋ ರೀತಿ ಬಿಂಬಿಸಿಕೊಳ್ಳುವಷ್ಟು. ಆದ್ರೆ 71 ವರ್ಷದ ಬೆಂಜಮಿನ್ ನೆತಾನ್ಯಹು ಈಗ 2 ವರ್ಷಗಳಲ್ಲಿ 4ನೇ ಬಾರಿಗೆ ರೀ ಎಲೆಕ್ಷನ್ ಎದುರಿಸ್ತಿದ್ದಾರೆ. ಯಾಕಂದ್ರೆ ಚುನಾವಣೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ಸಿಗುತ್ತಿಲ್ಲ.. ಇದೀಗ ನಾಲ್ಕನೇ ಬಾರಿಯ ಎಲೆಕ್ಷನ್​​ನಲ್ಲೂ ಸರ್ಕಾರ ರಚನೆಗೆ ಬೇಕಾದ 61 ಸ್ಥಾನಗಳನ್ನು ಪಡೆಯೋಕೆ ಸಾಧ್ಯವಾಗುತ್ಥಾ ಇಲ್ವಾ ಅಂತ ಟೆನ್ಶನ್​ನಲ್ಲಿದ್ದಾರೆ ಬೆಂಜಮಿನ್ ನೆತಾನ್ಯಹು.

-masthmagaa.com

Contact Us for Advertisement

Leave a Reply