ಮತ್ತೆ ಜಗತ್ತು ತಿರುಗಿ ನೋಡುವಂತೆ ಮಾಡಲಿದೆ ಇಸ್ರೋ..!

ಚಂದ್ರಯಾನ-2 ಮೂಲಕ ಜಗತ್ತಿನ ಗಮನ ಸೆಳೆದಿದ್ದ ಇಸ್ರೋ ಇನ್ನು 2-3 ವರ್ಷಗಳಲ್ಲಿ ಮತ್ತೊಮ್ಮೆ ಜಗತ್ತು ತಿರುಗಿ ನೋಡುವಂತೆ ಮಾಡಲಿದೆ. ನಮ್ಮ ಹೆಮ್ಮೆಯ ಇಸ್ರೋ ಮಂಗಳಯಾನ-2 ಮಿಷನ್ ಆರಂಭಿಸಿದೆ. ಈ ಬಗ್ಗೆ ಇಸ್ರೋ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದೆ. 2022-23ರ ವೇಳೆಗೆ ಈ ಉಪಗ್ರಹ ಉಡಾವಣೆ ಮಾಡೋ ಸಾಧ್ಯತೆ ಇದೆ. ಈ ಬಾರಿಯೂ ಮಂಗಳಗ್ರಹದ ಸುತ್ತಲೂ ಸುತ್ತುವ ಆರ್ಬಿಟರ್ ಕಳುಹಿಸಲಾಗುತ್ತೆ ಎನ್ನಲಾಗಿದೆ. ಆದ್ರೆ ಹಲವರು ಈ ಬಾರಿ ಮಂಗಳಗ್ರಹದ ಮೇಲೆ ಲ್ಯಾಂಡರ್ ಇಳಿಸಲಾಗುತ್ತೆ ಎಂದು ಹೇಳುತ್ತಿದ್ದಾರೆ.

ಈ ಹಿಂದೆ ಮಂಗಳಯಾನ ಮಂಗಳ ಗ್ರಹ ತಲುಪಲು 11 ತಿಂಗಳು ಹಿಡಿದಿತ್ತು. ಆದ್ರೆ ಈ ಬಾರಿ ಕೇವಲ 6 ತಿಂಗಳಲ್ಲಿ ತಲುಪಿಸಲಾಗುತ್ತೆ ಎಂದು ಹೇಳಲಾಗುತ್ತಿದೆ. 2014ರಲ್ಲಿ ಮಂಗಳಗ್ರಹದ ಕಕ್ಷೆ ತಲುಪಿದ ಉಪಗ್ರಹ ಮಾಮ್ ಈಗಲೂ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಫೋಟೋಗಳನ್ನು ಕಳುಹಿಸಿದೆ. ಅಲ್ಲದೆ ಬರೋಬ್ಬರಿ 5 ಟಿಬಿಯಷ್ಟು ಮಾಹಿತಿ ಕಲೆ ಹಾಕಿ, ಕಳುಹಿಸಿದೆ. ಜೊತೆಗೆ ಮಂಗಳಯಾನಕ್ಕೆ 450 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು.

Contact Us for Advertisement

Leave a Reply