ಆಂಧ್ರಪ್ರದೇಶದಲ್ಲಿ ಇಸ್ರೋ ವಿಜ್ಞಾನಿಯ ಕೊಲೆ

ಆಂಧ್ರಪ್ರದೇಶದ ಹೈದ್ರಾಬಾದ್‍ನಲ್ಲಿ ಇಸ್ರೋ ವಿಜ್ಞಾನಿಯೊಬ್ಬರನ್ನು ಕೊಲೆಗೈಯ್ಯಲಾಗಿದೆ. 56 ವರ್ಷದ NRSC ವಿಜ್ಞಾನಿ ಎಸ್.ಸುರೇಶ್ ಕೊಲೆಯಾದ ಇಸ್ರೋ ವಿಜ್ಞಾನಿ. ಅಮೀರ್ ಪೇಟೆ ಪ್ರದೇಶದ ಅಣ್ಣಾಪುರ ಅಪಾರ್ಟ್‍ಮೆಂಟ್‍ನಲ್ಲಿ ಎಸ್.ಸುರೇಶ್ ಮೃತದೇಹ ಪತ್ತೆಯಾಗಿದೆ. ಕೇರಳ ಮೂಲದ ಸುರೇಶ್ ಫ್ಲಾಟ್‍ನಲ್ಲಿ ಒಬ್ಬರೇ ವಾಸವಾಗಿದ್ದರು. ನಿನ್ನೆ ಬೆಳಗ್ಗೆ ಅವರು ಕಚೇರಿಗೆ ಹೋಗದೇ ಇದ್ದಾಗ ಅವರ ಸಹೋದ್ಯೋಗಿಗಳು ಸುರೇಶ್ ನಂಬರ್‍ಗೆ ಕರೆ ಮಾಡಿದ್ದಾರೆ. ಆದ್ರೆ ಸುರೇಶ್ ಸ್ಪಂದಿಸದೇ ಇದ್ದಾಗ, ಚೆನ್ನೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿರೋ ಅವರ ಪತ್ನಿ ಇಂದಿರಾಗೆ ವಿಷಯ ತಿಳಿಸಿದ್ದಾರೆ. ಸುರೇಶ್ ಪತ್ನಿ ತನ್ನ ಕುಟುಂಬಸ್ಥರೊಂದಿಗೆ ಬಂದು ಹೈದರಾಬಾದ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಬಾಗಿಲು ಒಡೆದು ಫ್ಲಾಟ್ ಒಳನುಗ್ಗಿದಾಗ ಸುರೇಶ್ ಮೃತದೇಹ ಪತ್ತೆಯಾಗಿದೆ.

ಸುರೇಶ್ ಕಳೆದ 20 ವರ್ಷಗಳಿಂದ ಇಲ್ಲೇ ವಾಸವಾಗಿದ್ದರು. ಅವರ ಪತ್ನಿ ಇಂದಿರಾ ಕೂಡ ಸುರೇಶ್ ಜೊತೆಯೇ ವಾಸವಾಗಿದ್ದರು. ಆದ್ರೆ 2005ರಲ್ಲಿ ಚೆನ್ನೈಗೆ ವರ್ಗಾವಣೆಯಾಗಿದ್ದರು.

ಸದ್ಯ ಪ್ರಕರಣ ದಾಖಲಿಸಿಕೊಂಡಿರೋ ಪೊಲೀಸರು ಅಪಾರ್ಟ್‍ಮೆಂಟ್‍ನ ಸಿಸಿಟಿವಿ ಪರಿಶೀಲಿಸಿದ್ದಾರೆ. ಜೊತೆಗೆ ಆರೋಪಿಗಾಗಿ ಬಲೆ ಬೀಸಿದ್ದಾರೆ.

Contact Us for Advertisement

Leave a Reply