ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ಕೊಡೋದು ಸರಿನಾ, ತಪ್ಪಾ?

masthmagaa.com:

ಶಾಲೆಗಳಲ್ಲಿ ಮಕ್ಕಳಿಗೆ ಬಿಸಿಯೂಟದ ಮೊಟ್ಟೆ ವಿತರಣೆಗೆ ಮಹಾಸಭಾ ಬಸವ ಮಂಟಪದ ಶ್ರೀ ಜಗದ್ಗುರು ಚನ್ನಬಸವಾನಂದ ಸ್ವಾಮೀಜಿ ಆಕ್ಷೇಪ ವ್ಯಕ್ತಪಡಿಸಿದ್ಧಾರೆ. ಮಕ್ಕಳಲ್ಲಿ ಸಸ್ಯಹಾರಿಗಳಿರ್ತಾರೆ, ಮಾಂಸಹಾರಿಗಳಿರ್ತಾರೆ. ಮಕ್ಕಳಿಗೆ ಆಹಾರ ನೀಡುವರೆಗೆ ಇದುವರೆಗೆ ಬೇಧಭಾವ ಇರಲಿಲ್ಲ. ಹೀಗಾಗಿ ಮಾಂಸಹಾರ ಆಗಿರೋ ಕೋಳಿ ಮೊಟ್ಟೆಯನ್ನ ಶಾಲೆಗಳಲ್ಲಿ ಕೊಡಬಾರ್ದು. ಮಕ್ಕಳಲ್ಲಿ ಬೇಧಭಾವ ತರಬಾರ್ದು. ಮೊಟ್ಟೆ ಬದಲು ಧಾನ್ಯಗಳನ್ನ ನೀಡಿ. ಸರ್ಕಾರ ಮೊಟ್ಟೆ ವಿತರಣೆ ಆದೇಶವನ್ನ ವಾಪಸ್ ಪಡೀಬೇಕು. ಇಲ್ಲದಿದ್ರೆ ಹೋರಾಟ ಮಾಡ್ತೀವಿ ಎಂದಿದ್ದಾರೆ.

ಇದರ ನಡುವೆ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಶಾಲಾ ಮಕ್ಕಳಿಗೆ ಮೊಟ್ಟೆ ನೀಡುವ ಯೋಜನೆ ಮುಂದುವರಿಯಲಿದೆ ಎಂದಿದ್ದಾರೆ.

-masthmagaa.com

Contact Us for Advertisement

Leave a Reply