ಪುಟಿನ್ ಓಡಾಡ್ತಿದ್ದ ಐಷಾರಾಮಿ ಕಾರ್ ಸೀಜ್!

masthmagaa.com:

ಪಾಶ್ಚಿಮಾತ್ಯ ದೇಶಗಳು ರಷ್ಯಾದ ಶ್ರೀಮಂತ ನಾಯಕರ ಆಸ್ತಿಗಳನ್ನು ಸೀಜ್ ಮಾಡೋ ತಮ್ಮ ಕೆಲಸವನ್ನು ಮುಂದುವರಿಸಿವೆ. ಅದೇ ರೀತಿ ಈಗ ರಷ್ಯಾದ ಅಲಿಗಾರ್ಕ್​​​​​ ಅಲಿಶರ್ ಉಸ್ಮಾನೋವ್​​ಗೆ ಸೇರಿದ 4.62 ಕೋಟಿ ಮೊತ್ತದ ಆರ್ಮೋರ್ಡ್​ ಮರ್ಸೀಡಿಜ್ ಕಾರನ್ನು ಸೀಜ್ ಮಾಡಲಾಗಿದೆ. ಸಾರ್ಡೀನಿಯಾದಲ್ಲಿ ಪಾಶ್ಚಿಮಾತ್ಯ ದೇಶಗಳ ನಿರ್ಬಂಧದ ಭಾಗವಾಗಿ ಈ ಸೀಜ್ ಮಾಡಲಾಗಿದೆ. ಹಾಗಂತ ಇದು ಸಾಮಾನ್ಯ ಕಾರ್ ಅಲ್ಲ. ಇದ್ರಲ್ಲಿ ಮಶೀನ್​ಗನ್ ವ್ಯವಸ್ಥೆ ಇದ್ದು, ಗ್ರನೇಡ್ ದಾಳಿ ಕೂಡ ನಡೆಸಬಹುದಾದ ಸಾಮರ್ಥ್ಯವನ್ನು ಹೊಂದಿದೆ. ಯುಕ್ರೇನ್ ಮೇಲಿನ ಯುದ್ಧವನ್ನು ಅಂತ್ಯಗೊಳಿಸುವಂತೆ ಪುಟಿನ್ ಮೇಲೆ ಒತ್ತಡ ಹೇರುವ ಸಲುವಾಗಿ ಅವರ ಆಪ್ತ ವಲಯದಲ್ಲಿರೋ ನಾಯಕರು ವಿದೇಶದಲ್ಲಿ ಹೊಂದಿರೋ ಆಸ್ತಿಯನ್ನು ಸೀಜ್ ಮಾಡಲಾಗಿದೆ. ಮರ್ಸೀಡಿಜ್ ಮೇಬ್ಯಾಚ್ ಅನ್ನೋ ಹೆಸರಿನ ಈ ಕಾರನ್ನು ಸಾರ್ಡೀನಿಯಾದ ಉತ್ತರ ಭಾಗದಲ್ಲಿರೋ ಪೋರ್ಟೋಸೆರ್ವೋದಲ್ಲಿ ವಶಕ್ಕೆ ಪಡೆಯಲಾಗಿದೆ. ಈ ಪ್ರದೇಶ ಬಿಲಿಯನೇರ್​​ಗಳ ತಾಣ ಅಂತಲೇ ಕರೆಯಲ್ಪಡುತ್ತೆ ಅಂತ ಇಟಲಿಯ ಮಾಧ್ಯಮಗಳು ವರದಿ ಮಾಡಿವೆ. ಈ ಕಾರನ್ನು ರಷ್ಯಾದಿಂದ ದೊಡ್ಡ ದೊಡ್ಡ ವ್ಯಕ್ತಿಗಳು ಬಂದಾಗ ಓಡಾಡಲು ಬಳಸಲಾಗ್ತಿತ್ತು. ಪುಟಿನ್ ಸೀಕ್ರೆಟ್ಟಾಗಿ ಇಲ್ಲಿಗೆ ಬಂದಾಗಲೂ ಇದ್ರಲ್ಲಿ ಓಡಾಡ್ತಿದ್ರು ಅಂತ ಕೂಡ ಇಟಲಿಯ ಮಾಧ್ಯಮಗಳು ವರದಿ ಮಾಡಿವೆ. ಅಷ್ಟೇ ಅಲ್ಲ..ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೇವ್, ಪುಟಿನ್​​​ರ ಮಕ್ಕಳು ಈ ದ್ವೀಪಕ್ಕೆ ಭೇಟಿ ನೀಡಿದಾಗಲೂ ಇದೇ ಕಾರಲ್ಲಿ ಓಡಾಡ್ತಿದ್ರು ಅಂತ ಮಾಹಿತಿ ಸಿಕ್ಕಿದೆ.

-masthmagaa.com

Contact Us for Advertisement

Leave a Reply