ಭಾರತಕ್ಕೆ ಭದ್ರತಾ ಮಂಡಳಿ ಸ್ಥಾನ ಫಿಕ್ಸ್‌: ಜೈಶಂಕರ್‌ ಹೇಳಿಕೆ

masthmagaa.com:

ಜಾಗತಿಕ ರಾಜಕೀಯದಲ್ಲಿ ಭಾರತದ ಪ್ರಭಾವ ಹೆಚ್ಚಾಗ್ತಿರೋ ನಡುವೆ ವಿದೇಶಾಂಗ ಸಚಿವ ಎಸ್‌.ಜೈಂಶಕರ್‌ ಇಂಟರೆಸ್ಟಿಂಗ್‌ ಹೇಳಿಕೆ ನೀಡಿದ್ದಾರೆ. ಭಾರತಕ್ಕೆ ಖಂಡಿತವಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವ ಸಿಗುತ್ತೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗುಜರಾತ್‌ನಲ್ಲಿ ನಡೆದ ಕಾರ್ಯಕ್ರಮ ಒಂದ್ರಲ್ಲಿ ಮಾತನಾಡಿರೋ ಜೈಶಂಕರ್‌, ವಿಶ್ವದೆಲ್ಲೆಡೆ ಈಗ ಭಾರತಕ್ಕೆ ಪರ್ಮನೆಂಟ್‌ ಸೀಟ್‌ ಸಿಗ್ಬೇಕು ಅನ್ನೋ ಕೂಗು ಜೋರಾಗ್ತಿದೆ. ಇದರ ನಡುವೆ ಇತ್ತೀಚೆಗೆ ವಿಶ್ವಸಂಸ್ಥೆ ವೀಕಾಗಿದೆ ಅನ್ನೋ ಭಾವನೆ ಇದೆ. ಯುಕ್ರೇನ್‌ ಯುದ್ಧ ವಿಚಾರದಲ್ಲಿ ವಿಶ್ವಸಂಸ್ಥೆಗೆ ಒಮ್ಮತ ಮೂಡಿಸೋಕಾಗ್ಲಿಲ್ಲ. ಗಾಜಾ ವಿಚಾರದಲ್ಲೂ ಹೀಗೆ ಆಯ್ತು. ಹೀಗಾಗಿ ನಮಗೆ ಪರ್ಮನೆಂಟ್‌ ಸೀಟ್‌ ಸಿಗೋ ಚಾನ್ಸಸ್‌ ಜಾಸ್ತಿಯಾಗಿದೆ. ಅತ್ತ ಭಾರತದ ಜೊತೆಗೆ ಜಪಾನ್‌, ಜರ್ಮನಿ, ಈಜಿಪ್ಟ್‌ ಕೂಡ ಖಾಯಂ ಸ್ಥಾನ ಕೇಳ್ತಿವೆ. ಹೀಗಾಗಿ ಈ ಕೂಗಿಗೆ ಈಗ ಬಲ ಬಂದಿದೆ. ಖಂಡಿತವಾಗಿ ನಮಗೆ ಖಾಯಂ ಸ್ಥಾನ ಸಿಗುತ್ತೆ. ಆದ್ರೆ ನಾವು ಈ ಒತ್ತಡವನ್ನ ಇನ್ನಷ್ಟು ಜಾಸ್ತಿ ಮಾಡ್ಬೇಕಿದೆ ಅಂತ ಹೇಳಿದ್ದಾರೆ. ಅಂದ್ಹಾಗೆ ವಿಶ್ವದಲ್ಲಿ ಶಾಂತಿ ಮತ್ತು ಭದ್ರತೆಯನ್ನ ಸ್ಥಾಪಿಸೋಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಇದೆ. ಎರಡನೇ ಮಹಾಯುದ್ಧದ ನಂತ್ರ ಇದು ಸೃಷ್ಟಿಯಾಯ್ತು. ಹೀಗಾಗಿ ಮಹಾಯುದ್ಧದಲ್ಲಿ ಗೆದ್ದ ದೇಶಗಳೇ ಇದ್ರಲ್ಲಿ ಸ್ಥಾನ ಪಡ್ಕೊಂಡಿವೆ. ಸದ್ಯ ಅಮೆರಿಕ, ಬ್ರಿಟನ್‌, ರಷ್ಯಾ, ಫ್ರಾನ್ಸ್‌ ಮತ್ತು ಚೀನಾ ಖಾಯಂ ಸ್ಥಾನ ಹೊಂದಿವೆ. ಆದ್ರೆ ಜನಸಂಖ್ಯೆಯಲ್ಲಿ ವಿಶ್ವದ ಅತಿದೊಡ್ಡ ರಾಷ್ಟ್ರವಾಗಿರೋ ಭಾರತವಿಲ್ಲದೇ ಅದೆಂತಹ ಭದ್ರತಾ ಸಂಸ್ಥೆ ಭಾರತಕ್ಕೂ ಪರ್ಮನೆಂಟ್‌ ಸೀಟ್‌ ಸಿಗ್ಬೇಕು ಅಂತ ಇತ್ತೀಚಿನ ವರ್ಷಗಳಲ್ಲಿ ಆಗ್ರಹ ಜಾಸ್ತಿಯಾಗ್ತಿದೆ. ಈವನ್‌ ಅಮೆರಿಕ ಕೂಡ ಭಾರತಕ್ಕೆ ಧ್ವನಿಗೂಡಿಸಿದೆ. ಆದ್ರೆ ಚೀನಾ ಮಾತ್ರ ಇದಕ್ಕೆ ಅಡ್ಡಗಾಲು ಹಾಕ್ತಿದೆ. ಭಾರತಕ್ಕೆ ಭದ್ರತಾ ಸಂಸ್ಥೆಯಲ್ಲಿ ಖಾಯಂಸ್ಥಾನ ಸಿಕ್ರೆ , ಜಾಗತಿಕ ವೇದಿಕೆಯಲ್ಲಿ ಭಾರತದ ಮಾತಿಗೆ ಇನ್ನಷ್ಟು ಮಹತ್ವ ಬರುತ್ತೆ. ಅದ್ರಲ್ಲೂ ಈ ಪಾಕ್‌ನ ಪುಂಡರನ್ನ ಜಾಗತಿಕ ಉಗ್ರರು ಅಂತ ಗುರುತಿಸೋಕೆ ಸರಳ ಆಗುತ್ತೆ….

-masthmagaa.com

Contact Us for Advertisement

Leave a Reply