ಜಮ್ಮು ಕಾಶ್ಮೀರದಲ್ಲಿ ಪೊಲೀಸ್​​, ಸೇನೆಗೆ ದೊಡ್ಡ ಗೆಲುವು

ಜಮ್ಮು ಕಾಶ್ಮೀರ: ಸೇನೆ ಮತ್ತು ಉಗ್ರರ ವಿರುದ್ಧ ಆಪರೇಷನ್​​ನಲ್ಲಿ ಸೇನೆಗೆ ದೊಡ್ಡ ಗೆಲುವು ಸಿಕ್ಕಿದೆ. ನಿನ್ನೆ ಇಲ್ಲಿನ ತ್ರಾಲ್​ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಇವರಲ್ಲಿ ಜಗವತ್​ ಉಲ್ ಹಿಂದ್​ನ ಹಮೀದ್ ಲಲ್ಹಾರಿ ಕೂಡ ಸೇರಿದ್ದಾನೆ. ಈತ 2016ರಲ್ಲಿ ಜಾಕಿರ್ ಮೂಸಾನನ್ನು ಹೊಡೆದುರುಳಿಸಿದ ಬಳಿಕ ಸಂಘಟನೆಯ ಉಸ್ತುವಾರಿ ವಹಿಸಿಕೊಂಡಿದ್ದ ಎಂದು ಜಮ್ಮು ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಜಮ್ಮು ಕಾಶ್ಮೀರದ ಪೊಲೀಸ್ ಡಿಜಿಪಿ ದಿಲ್​ ಬಾಗ್​ ಸಿಂಗ್​​, ನಿನ್ನೆಯ ದಾಳಿಯಲ್ಲಿ ಹತರಾದ ಉಗ್ರರೆಲ್ಲಾ ಲೋಕಲ್ ಉಗ್ರರಾಗಿದ್ದು, ಇವರಲ್ಲಿ ಹಮೀದ್ ಲಲ್ಹಾರಿ ಕೂಡ ಒಬ್ಬ. ಜಾಕಿರ್ ಮೂಸಾ ಬಳಿಕ ಗ್ರೂಪ್​​ನ ಜವಾಬ್ದಾರಿಯನ್ನು ಲಲ್ಹಾರಿಗೆ ನೀಡಲಾಗಿತ್ತು. ಲಲ್ಹಾರಿ ತನ್ನ ಜೊತೆಗೆ  ನಾವೇದ್​ ಮತ್ತು ಜುನೈದ್​​ನನ್ನು ಸೇರಿಸಿಕೊಂಡಿದ್ದ. ಈ ಮೂವರೂ ಜೈಷ್ ಎ ಮೊಹ್ಮದ್ ಸಂಘಟನೆ ಜೊತೆಗೆ ಕೆಲಸ ಮಾಡುತ್ತಿದ್ದರು  ಅಂತ ತಿಳಿಸಿದ್ದಾರೆ.

Contact Us for Advertisement

Leave a Reply