ಜಮ್ಮು ಕಾಶ್ಮೀರದಲ್ಲಿ ಗುಂಡಿನ ಚಕಮಕಿ..ಓರ್ವ ಉಗ್ರ ಮಟಾಷ್..!

masthmagaa.com:

ಜಮ್ಮು ಕಾಶ್ಮೀರದ ಶೋಪಿಯಾನ್​​ನಲ್ಲಿ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ರೆಬೆನೆ ಖ್ವಾಜಾಪೋರಾದಲ್ಲಿ ರಕ್ಷಣಾ ಪಡೆಗಳು ಓರ್ವ ಉಗ್ರನನ್ನು ಹೊಡೆದುರುಳಿಸಿದ್ದಾರೆ. ಆದ್ರೆ ಇನ್ನೂ ಹಲವು ಉಗ್ರರು ಅಡಗಿದ್ದು, ಗುಂಡಿನ ದಾಳಿ ನಡೆಸುತ್ತಿದ್ದಾರೆ. ಅದಕ್ಕೆ ಯೋಧರು ಕೂಡ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯೆ ನೀಡ್ತಿದ್ದಾರೆ. ಸ್ಥಳೀಯ ಪೊಲೀಸರು ಮತ್ತು ಸಿಆರ್​ಪಿಎಫ್ ಯೋಧರಿಗೆ ರೆಬೆನ್​​ ಖ್ವಾಜಾಪೋರಾದಲ್ಲಿ ಉಗ್ರರು ಅಡಗಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಈ ಪ್ರದೇಶದಲ್ಲಿ ಪೊಲೀಸರು ಮತ್ತು ಸಿಆರ್​ಪಿಎಫ್ ಯೋಧರು ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಈ ವೇಳೆ ಉಗ್ರರು ಕೂಡ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಫೈರಿಂಗ್​ನಲ್ಲಿ ಓರ್ವ ಉಗ್ರರ ಸಾವನ್ನಪ್ಪಿದ್ದಾನೆ. ಪ್ರದೇಶವನ್ನು ಸುತ್ತುವರಿದಿರುವ ಯೋಧರು ಉಳಿದ ಉಗ್ರರನ್ನು ಹೊಡೆದುರುಳಿಸಲು, ಕಾರ್ಯಾಚರಣೆ ನಡೆಸ್ತಿದ್ದಾರೆ.

masthmagaa.com:

Contact Us for Advertisement

Leave a Reply