ಬೈಡೆನ್ ಪ್ರಪೋಸಲ್ ರೆಜೆಕ್ಟ್ ಮಾಡಿದ ಜಿನ್ ಪಿಂಗ್!

masthmagaa.com:

ಇತ್ತೀಚೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​​ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ 90 ನಿಮಿಷಗಳ ಫೋನ್​ಕಾಲ್​​ನಲ್ಲಿ ಮಾತಾಡಿದ್ರು. ಈ ವೇಳೆ ಮುಖಾಮುಖಿ ಮೀಟ್ ಮಾಡಣ ಅಂತ ಜೋ ಬೈಡೆನ್ ಆಫರ್ ಕೊಟ್ರೂ ಕ್ಸಿ ಜಿನ್​ಪಿಂಗ್ ಅದನ್ನ ನಿರಾಕರಿಸಿದ್ರು ಅಂತ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಆದ್ರೆ ಇದೆಲ್ಲಾ ಸುಳ್ಳು.. ಆ ರೀತಿ ಏನೂ ಮಾತುಕತೆ ನಡೆದಿಲ್ಲ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಇನ್ನು ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರೋ ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್ ಜೇಕ್ ಸಲ್ಲಿವನ್​, ಕ್ಸಿ ಜಿನ್​ಪಿಂಗ್ ಮತ್ತು ಜೋ ಬೈಡೆನ್ ಇಬ್ಬರು ವೈಯಕ್ತಿಕವಾಗಿ ಚರ್ಚಿಸಿದ್ದಾರೆ. ಈ ಬಗ್ಗೆ ನಿಖರವಾದ ಮಾಹಿತಿ ಇಲ್ಲ ಅಂತ ಹೇಳಿದ್ರು. ಆದ್ರೆ ಮಾಧ್ಯಮಗಳು ಮಾತ್ರ ಜೋ ಬೈಡೆನ್ ಮುಖಾಮುಖಿ ಮಾತುಕತೆಗೆ ಆಫರ್ ಕೊಟ್ರು. ಆದ್ರೆ ಅದನ್ನು ನಿರಾಕರಿಸಿದ ಜಿನ್​ಪಿಂಗ್​​ ಮೊದಲು ಉಭಯದೇಶಗಳ ನಡುವಿನ ಸಂಬಂಧ ಸರಿಯಾಗಬೇಕು. ಉತ್ತಮ ವಾತಾವರಣ ಸೃಷ್ಟಿಯಾಗಬೇಕು ಅಂತ ಹೇಳಿದ್ರು ಅಂತ ವರದಿ ಮಾಡಿದ್ವು. ಇನ್ನು ಇದೇ ವರ್ಷ ಅಕ್ಟೋಬರ್​ನಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಇದ್ರಲ್ಲಿ ಬೈಡೆನ್ ಭಾಗಿಯಾದ್ರೂ ಕ್ಸಿ ಜಿನ್​ಪಿಂಗ್ ಭಾಗಿಯಾಗೋದು ಅನುಮಾನ. ಯಾಕಂದ್ರೆ ಕೊರೋನಾ ಹಾವಳಿ ಶುರುವಾದ ಬಳಿಕ ಈವರೆಗೆ ಕ್ಸಿ ಜಿನ್​ಪಿಂಗ್ ದೇಶ ಬಿಟ್ಟು ಹೊರಹೋಗಿಲ್ಲ.

-masthmagaa.com

Contact Us for Advertisement

Leave a Reply