ಮೆಕ್ಸಿಕೋದಲ್ಲಿ ನಿಲ್ಲದ ಪತ್ರಕರ್ತರ ಸರಣಿ ಹತ್ಯೆ

masthmagaa.com:

ಮೆಕ್ಸಿಕೋದಲ್ಲಿ ಪತ್ರಕರ್ತರ ಸರಣಿ ಹತ್ಯೆ ಮುಂದುವರಿದಿದೆ. ಉತ್ತರ ಅಮೆರಿಕ ಖಂಡದಲ್ಲಿ ಬರೋ ಮೆಕ್ಸಿಕೊ ದೇಶದ ವಹಾಕಾ (Oaxaca) ರಾಜ್ಯದಲ್ಲಿ ಆನ್​ಲೈನ್​ ನ್ಯೂಸ್​ ವೆಬ್​ಸೈಟ್​ನ ನಿರ್ದೇಶಕರನ್ನ ಗುಂಡಿಕ್ಕಿ ಕೊಲ್ಲಲಾಗಿದೆ. ಈ ಪತ್ರಕರ್ತ ಪಾಲಿಟಿಕ್ಸ್ ಮತ್ತು ಸ್ಥಳೀಯ ಸರ್ಕಾರದಲ್ಲಿ ನಡೀತಿದ್ದ ಭ್ರಷ್ಟಾಚಾರದ ಬಗ್ಗೆ ಬರೀತಿದ್ದ ಅನ್ನೋದು ಗೊತ್ತಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನ ಅರೆಸ್ಟ್ ಮಾಡಲಾಗಿದೆ ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೆ ಮೆಕ್ಸಿಕೋದಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಐವರು ಪತ್ರರ್ಕರ ಹತ್ಯೆ ನಡೆದಂತಾಗಿದೆ. ಪತ್ರಕರ್ತರಿಗೆ ಅಪಾಯಕಾರಿಯಾಗಿರೋ ದೇಶಗಳಲ್ಲಿ ಮೆಕ್ಸಿಕೋ ಕೂಡ ಒಂದಾಗಿದೆ. ಮಾನವ ಹಕ್ಕು ಸಂಘಟನೆಗಳ ಪ್ರಕಾರ 2000ನೇ ಇಸವಿಯಿಂದ 2021ರವರೆಗೆ ಮೆಕ್ಸಿಕೋದಲ್ಲಿ ಸುಮಾರು 145 ಜರ್ನಲಿಸ್ಟ್​ಗಳ ಹತ್ಯೆ ನಡೆದಿದೆ. ಇದರ ಬೆನ್ನಲ್ಲೇ ಪತ್ರಕರ್ತರಿಗೆ ರಕ್ಷಣೆ ಕೊಡಿ ಅಂತ ಅಂತಾರಾಷ್ಟ್ರೀಯ ಸಮುದಾಯ ಮೆಕ್ಸಿಕೋ ಮೇಲೆ ಒತ್ತಡ ಹಾಕ್ತಿವೆ.

-masthmagaa.com

Contact Us for Advertisement

Leave a Reply