ಉಗ್ರ ನಿಜ್ಜರ್‌ ಹತ್ಯೆ ವಿಚಾರ ಹಿಂದಿನ ಸರ್ಕಾರಕ್ಕೆ ಕೇಳಿ: ಜಸ್ಟಿನ್‌ ಟ್ರುಡು

masthmagaa.com:

ಇನ್ನೊಂದು ಕಡೆ ವರ್ಷಕಳೆದ್ರೂ ನಿಜ್ಜರ್‌ ಹತ್ಯೆ ವಿಚಾರ ಹಿಡ್ಕೊಂಡು ನೇತಾಡ್ತಿರೋ ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡು ಈಗ ಪುನಃ ಅದೇ ರಾಗ ಹಾಡಿದ್ದಾರೆ. ಈ ಬಾರಿ ತಮ್ಮದೇ ದೇಶದ ಹಿಂದಿನ ಸರ್ಕಾರ ಅಂದ್ರೆ ಮಾಜಿ ಪ್ರಧಾನಿ ಸ್ಟೀಫನ್‌ ಹಾರ್ಪರ್‌ ಅವ್ರ ಸರ್ಕಾರವನ್ನ ಟೀಕಿಸಿದ್ದಾರೆ. ಕೆನಡಾದ ಚುನಾವಣೆಯಲ್ಲಿ ವಿದೇಶಗಳ ಹಸ್ತಕ್ಷೇಪ ವಿಚಾರವಾಗಿ ಸಾರ್ವಜನಿಕ ವಿಚಾರಣೆಗೆ ಹಾಜರಾಗಿರೋ ವೇಳೆ ಟ್ರುಡು ಈ ರೀತಿ ಹೇಳಿದ್ದಾರೆ. ಅಲ್ಲಿನ ವಿಚಾರಣಾ ಆಯೋಗದ ಮುಂದೆ ಮಾತನಾಡೋವಾಗ ಹರ್ದೀಪ್‌ ಸಿಂಗ್‌ ವಿಚಾರ ಮುನ್ನೆಲೆಗೆ ಬಂದಿದೆ. ಭಾರತದ ಏಜೆಂಟ್ಸ್‌ ಕೆನಡಾ ನೆಲದಲ್ಲಿ ಈ ರೀತಿ ಚಟುವಟಿಕೆ ನಡೆಸಿರೋದಕ್ಕೆ ಸೂಕ್ತ ಕ್ರಮ ತೆಗೆದ್ಕೊಳ್ಳಲು ಸೋತಿರೋ ಬಗ್ಗೆ ಟ್ರುಡುಗೆ ಪ್ರಶ್ನಿಸಲಾಯ್ತು. ಇದಕ್ಕೆ ಉತ್ತರಿಸಿದ ಟ್ರುಡು, ಇದು ನನ್ನ ತಪ್ಪಲ್ಲ ಅಂತ ಕೆನಡಾದ ಹಿಂದಿನ ಸರ್ಕಾರವನ್ನ ದೂಷಿಸಿದ್ದಾರೆ. ʻಈ ಪ್ರಶ್ನೆಯನ್ನ ನೀವು ಹಿಂದಿನ ಸರ್ಕಾರಕ್ಕೆ ಕೇಳಿದ್ರೆ ಒಳ್ಳೇದು. ಅವ್ರು ಭಾರತದ ಈಗಿನ ಸರ್ಕಾರದ ಜೊತೆ ಅತ್ಯಂತ ಕ್ಲೋಸ್‌ ಆಗಿದ್ರುʼ ಅಂತೇಳಿದ್ದಾರೆ.

-masthmagaa.com

Contact Us for Advertisement

Leave a Reply