ಅಫ್ಘಾನಿಸ್ತಾನದಲ್ಲಿ ಸ್ಫೋಟ: 19 ಮಂದಿ ಸಾವು, 50ಕ್ಕೂ ಹೆಚ್ಚು ಮಂದಿಗೆ ಗಾಯ

masthmagaa.com:

ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್​ನಲ್ಲಿರೋ ಮಿಲಿಟರಿ ಆಸ್ಪತ್ರೆ ಬಳಿ ಎರಡೆರಡು ಆತ್ಮಾಹುತಿ ದಾಳಿ ಸಂಭವಿಸಿದೆ. ಅದ್ರ ಬೆನ್ನಲ್ಲೇ ಗುಂಡಿನ ದಾಳಿ ನಡೆಸಲಾಗಿದೆ. ಇದ್ರಲ್ಲಿ 19 ಮಂದಿ ಪ್ರಾಣ ಕಳ್ಕೊಂಡಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಅಂತ ವರದಿಯಾಗಿದೆ. ರೋಗಿಗಳು ಮತ್ತು ವೈದ್ಯರನ್ನು ಸುರಕ್ಷಿತ ಕೋಣೆಗಳಿಗೆ ಶಿಫ್ಟ್ ಮಾಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಅಫ್ಘಾನಿಸ್ತಾನ ಆಂತರಿಕ ಸಚಿವಾಲಯದ ವಕ್ತಾರ ಖಾರಿ ಸಯೀದ್ ಖೋಸ್ಟಿ, ಆಸ್ಪತ್ರೆ ಬಳಿ ತಾಲಿಬಾನ್ ವಿಶೇಷ ಪಡೆ ಬಂದಿದೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply