ಜಗ್ಗೇಶ್-ದರ್ಶನ್ ವಿವಾದ: ‘ಇದು ಬೇಕಿತ್ತಾ ನಿಮಗೆ’ ಅಂತ ಜಗ್ಗೇಶ್ ಹೇಳಿದ್ಯಾರಿಗೆ?

masthmagaa.com:

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ವಿರುದ್ಧ ನಟ ಜಗ್ಗೇಶ್​ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗ್ತಿದ್ದಂತೇ ಜಗ್ಗೇಶ್ ಆ ಬಗ್ಗೆ ನಿನ್ನೆ ಕ್ಷಮೆ ಕೇಳಿದ್ರು. ಆದ್ರೆ ಇವತ್ತು ಕನ್ನಡದ ಖಾಸಗಿ ದಿನಪತ್ರಿಕೆಯೊಂದು ‘ದರ್ಶನ್ ಅಭಿಮಾನಿಗಳಿಗೆ ಕಾಗೆ ಹಾರಿಸಲು ಹೋಗಿ ಬಟಾಬಯಲಾದ ಜಗ್ಗೇಶ್’ ಅನ್ನೋ ಶೀರ್ಷಿಕೆ ಅಡಿಯಲ್ಲಿ ವರದಿ ಮಾಡಿತ್ತು. ಇದರಿಂದ ಸಿಟ್ಟಿಗೆದ್ದ ಜಗ್ಗೇಶ್, ಬಟಾಬಯಲು ಮಾಡೋಕೇ ಏನಿದೆ. ನಾನೇನು ದರೋಡೆ ಮಾಡಿದ್ದೀನಾ, ಕಳ್ಳತನ ಮಾಡಿದ್ದೀನಾ, ಹೆದರಿಕೊಂಡು ಕದ್ದು ಕೂತಿದ್ದೀನಾ? ನಿನ್ನೆ ಶೂಟಿಂಗ್ ಸೆಟ್​​ಗೆ ಬಂದಂತಹ ದರ್ಶನ್ ಅಭಿಮಾನಿಗಳ ಮುಂದೆನೇ ಕೂತು ಮಾತನಾಡಿದ್ದೀನಿ ತಾನೆ, ಇನ್ನೇನು. ನಾನು ಖಾಸಗಿಯಾಗಿ ಮಾತನಾಡಿದ್ದು ಹೌದು. ಅದನ್ನ ಸಾರ್ವಜನಿಕವಾಗಿ ಮಾತನಾಡಿದ್ದೀನಾ? ಅಂತ ಪ್ರಶ್ನೆ ಮಾಡಿದ್ದಾರೆ. ಅಲ್ಲದೆ ದಿನ ಪತ್ರಿಕೆ ವಿರುದ್ಧ ವಾಗ್ದಾಳಿ ನಡೆಸಿದ ಜಗ್ಗೇಶ್, ನಾನ್ ಹುಟ್ಟಿದಾಗ ನೀವ್ ಯಾರಿಗೆ ಬಕೆಟ್​ ಹಿಡಿಯುತ್ತಿದ್ದೀರೋ ಅವರಿನ್ನೂ ಹುಟ್ಟಿರಲಿಲ್ಲ. ಇವತ್ತು ನಾನ್ ಈ ಜಾಗದಲ್ಲಿ ನಿಂತಿದ್ದೀನಿ ಅಂದ್ರೆ ಅದು ನಿಮ್ಮಿಂದ ಅಲ್ಲ, ಕನ್ನಡಿಗರಿಂದ. ಕನ್ನಡ ಬಿಟ್ಟು ಬೇರೆ ಯಾವುದೇ ಭಾಷೆಗೂ ನಾನ್ ಕಾಲಿಟ್ಟಿಲ್ಲ. ನನಗೆ ಅವಮಾನ ಮಾಡ್ತಿದ್ದೀರಾ ನೀವು. ನಾನ್ ಕಾಗೆ ಹಾರಿಸೋದಿದ್ರೆ 20 ಸಲ ಎಂಎಲ್​ಎ ಆಗ್ತಿದ್ದೆ. 20 ಸಲ ಮಂತ್ರಿಯಾಗ್ತಿದೆ. ಬಕೆಟ್​ ಹಿಡಿದಿದ್ರೆ, ಬೂಟ್ ನೆಕ್ಕಿದ್ರೆ ನೂರಾರು ಪೋಸ್ಟ್​ ತೆಗೆದುಕೊಳ್ತಿದ್ದೆ. ರಾಜ್​ಕುಮಾರ್, ಅಂಬರೀಶ್, ವಿಷ್ಣುವರ್ಧನ್ ಸತ್ತ ಮಾರನೇ ದಿನ ಕನ್ನಡದ ಸ್ವಾಭಿಮಾನ ಕೂಡ ಸಾಯ್ತಾ ಇದೆ. ನೆನಪಿಟ್ಟುಕೊಳ್ಳಿ ಉಳಿದಿರೋದು ನಾವ್ ಮೂರ್ನಾಲ್ಕು ಜನ. ನಾನು, ಶಿವರಾಜ್​ಕುಮಾರ್, ರವಿಚಂದ್ರನ್ ಮತ್ತು ರಮೇಶ್ ಅರವಿಂದ್. ನಾವ್ ಸತ್ತಮೇಲೆ ನಮ್ಮ ತಿಥಿ ಮಾಡಿ, ಖುಷಿಪಡಿ ನೀವೆಲ್ಲಾ. ನನಗೆ ಬುದ್ಧಿ ಕಲಿಸಬೇಕಾದದ್ದು ದೇವರು, ಕನ್ನಡಿಗರು, ಹೆತ್ತವರು. ಯಾವೊಬ್ಬ ನಟ, ಅವನ ಅಭಿಮಾನಿಗಳು ನನ್ನ ಹತ್ರ ಬರೋಕ್ಕಾಗಲ್ಲ. ನನ್ನ ಪಾಡಿಗೆ ನನ್ನ ಬಿಡಿ. ಹೀಗೆ ಯಾವತ್ತೂ ಮಾಡಬೇಡಿ. ನನಗೆ ನಿಮ್ಮ ಬಗ್ಗೆ ನಾಚಿಕೆಯಾಗ್ತಿದೆ. ಕನ್ನಡ ಚಿತ್ರರಂಗದಲ್ಲಿ ನಾನೊಬ್ಬನೇ ಬೆಳೀಬೇಕು, ನನ್ನ ಚಿತ್ರ ಮಾತ್ರ ಓಡಬೇಕು ಅನ್ನೋ ಮನೋಭಾವನೆ ಇದೆ. ನೀವ್​ ಹೀಗೆ ಕಾಗೆ ಹಾರಿಸಿದ್ದು ಅಂತೆಲ್ಲಾ ವರದಿ ಮಾಡಿದ್ರೆ ಇದಕ್ಕೆಲ್ಲಾ ಬೆಂಬಲಿಸಿದಂತೆ ಆಗುತ್ತೆ. ನನ್ನ 40 ವರ್ಷದ ಸಿನಿ ಜರ್ನಿಯನ್ನ ಅವಮಾನ ಮಾಡಿದ್ದೀರಿ. ಇದು ನನಗೆ ತುಂಬಾ ನೋವಾಗಿದೆ. ಅದ್ಯಾವ್ದೋ ವೆಬ್​ ಡಿಸೈನರ್​ ಬಗ್ಗೆ ಮಾತನಾಡಿದ್ದೀನಿ. ಬಿ ಕೇರ್​ಫುಲ್​. ಇದರ ಬಗ್ಗೆ ಮಾತಾಡಬೇಡಿ. ಕನ್ನಡ ಚಿತ್ರರಂಗ ಇವತ್ತು ಹಾಳಾಗ್ತಿದೆ. ಒಬ್ಬೊಬ್ಬ ನಿರ್ಮಾಪಕ ಕೂಡ ಬೀದಿಗೆ ಬರ್ತಿದ್ದಾನೆ, ಸೂಸೈಡ್​ ಮಾಡಿಕೊಳ್ತಿದ್ದಾನೆ. ನನಗೆ ಇಲ್ವಾ ಅಭಿಮಾನಿಗಳ ಸಂಘ. ಸ್ಟಾರ್​ಗಳ ನಡುವೆ ತಂದಿಡೋದನ್ನ ಬಿಡಿ. ನಾನ್ ಯಾವತ್ತೂ ಓಡೋಗಲ್ಲ. ಅಪ್ಪನಿಗೆ ಹುಟ್ಟಿದ ಮಗ ನಾನು ಅಂತ ಜಗ್ಗೇಶ್ ಸಿಟ್ಟಾಗಿದ್ದಾರೆ.

-masthmagaa.com

Contact Us for Advertisement

Leave a Reply