ವಿಧಾನಮಂಡಲ ಅಧಿವೇಶನ: ಕ್ಯಾಮೆರಾಗೆ ನೋ ಎಂಟ್ರಿ..!

ಇಂದಿನಿಂದ ವಿಧಾನಮಂಡಲ ಅಧಿವೇಶನ ಶುರುವಾಗಲಿದೆ. ಇಂದಿನಿಂದ 3 ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ನೆರೆ, ಪರಿಹಾರ ವಿಳಂಬ, ಖಜಾನೆ ಖಾಲಿಯಾಗಿರೋ ವಿಚಾರ ಸದ್ದು ಮಾಡಲಿವೆ. ರಾಜ್ಯ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟು ಬಿಜೆಪಿಯನ್ನು ಹಣಿಯಲು ಕಾಂಗ್ರೆಸ್-ಜೆಡಿಎಸ್ ರಣತಂತ್ರ ರೂಪಿಸಿವೆ. ವಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಅಬ್ಬರಿಸಲಿದ್ದಾರೆ. ಪ್ರವಾಹ ಬಂದು ಸರ್ಕಾರದ ಆರ್ಥಿಕ ಸ್ಥಿತಿ ಸರಿಯಿಲ್ಲವಾದ್ದರಿಂದ ದೋಸ್ತಿ ಸರ್ಕಾರದ ಬಜೆಟ್‍ಗೆ ಅನುಮೋದನೆ ಪಡೆಯಲು ನಿರ್ಧರಿಸಲಾಗಿದೆ.

ಆದ್ರೆ ಈ ಬಾರಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಲಾಗಿದೆ. ಇದು ಟಿವಿ ಮತ್ತು ಮುದ್ರಣ ಮಾಧ್ಯಮದ ಪತ್ರಕರ್ತರಿಗೆ ಮಾತ್ರವೇ ಒಳಗೆ ಹೋಗಲು ಅವಕಾಶವಿದೆ. ಕ್ಯಾಮರಾಗಳನ್ನು ಒಳಗೆ ಒಯ್ಯದಂತೆ ನಿರ್ಬಂಧಿಸಲಾಗಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಈ ನಿರ್ಧಾರಕ್ಕೆ ವಿಪಕ್ಷಗಳು ಭಾರಿ ಆಕ್ಷೇಪ ವ್ಯಕ್ತಪಡಿಸಿವೆ.

Contact Us for Advertisement

Leave a Reply