ರಾಜ್ಯದಲ್ಲಿ ಕೊರೋನಾ ಲಸಿಕೆ ಪೂರೈಕೆ ಹೆಚ್ಚಾಗಿದೆ- ಬಸವರಾಜ್ ಬೊಮ್ಮಾಯಿ

masthmagaa.com:

ರಾಜ್ಯದಲ್ಲಿ ಕೊರೋನಾ ಲಸಿಕೆಯ ಪೂರೈಕೆ ಹೆಚ್ಚಾಗಿದೆ. ಹೀಗಾಗಿ ಈ ತಿಂಗಳು ಪ್ರತಿದಿನ 5 ಲಕ್ಷ ಡೋಸ್ ಲಸಿಕೆ ಹಾಕಲು ನಿರ್ಧರಿಸಿದ್ದೀವಿ ಅಂತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ದಕ್ಷಿಣಕನ್ನಡ, ಉಡುಪಿ, ಹಾಸನ, ಕೊಡಗು, ಚಾಮರಾಜನಗರ ಜಿಲ್ಲೆಗಳ ಡಿಸಿ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಬಳಿಕ ಮಾತನಾಡಿದ ಅವರು, ಕೊರೋನಾ ಪರೀಕ್ಷೆಗಳನ್ನ ಹೆಚ್ಚಿಸುವಂತೆ ಡಿಸಿಗಳಿಗೆ ಸೂಚನೆ ನೀಡಿದ್ದೀನಿ ಅಂದ್ರು. ಇನ್ನು ರಾಜಕೀಯ ಪಕ್ಷಗಳ ಸಭೆಗಳಲ್ಲಿ ಹೆಚ್ಚಿನ ಜನರ ಸೇರುತ್ತಿರುವುದು, ರ್ಯಾಲಿಗಳನ್ನ ಮಾಡುತ್ತಿರುವುದು ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಎಲ್ಲವನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಲಿದೆ. ರ್ಯಾಲಿ, ಚುನಾವಣೆ, ಸಭೆ ಸಮಾರಂಭಗಳಿಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡ್ತೀವಿ ಎಂದಿದ್ದಾರೆ. ಶಾಲೆ ಆರಂಭದ ಬಗ್ಗೆ ಮಾತನಾಡಿದ ಸಿಎಂ, ಸದ್ಯಕ್ಕೆ 1ರಿಂದ 5 ನೇ ತರಗತಿ ಮಕ್ಕಳಿಗೆ ಶಾಲೆ ಆರಂಭಿಸುವ ಬಗ್ಗೆ ಚರ್ಚೆ ಮಾಡಿಲ್ಲ. ಸೆಪ್ಟೆಂಬರ್​ 6ರಿಂದ ಆರಂಭವಾಗಲಿರೋ 6,7 ಮತ್ತು 8ನೇ ತರಗತಿಗಳನ್ನ ಗಮನಿಸಿ ಮುಂದಿನ ತೀರ್ಮಾನ ತಗೆದುಕೊಳ್ತೀವಿ ಅಂತ ಮಾಹಿತಿ ನೀಡಿದ್ರು.

-masthmagaa.com

Contact Us for Advertisement

Leave a Reply