ಪ್ರಯಾಣಿಕರೇ ಗಮನಿಸಿ.. ನಾಳೆಯೂ KSRTC, BMTC ಬಸ್​ ಇರಲ್ಲ

masthmagaa.com:

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಇವತ್ತು ನಡೆಸಿದ ಮುಷ್ಕರ ಬಹುತೇಕ ಯಶಸ್ವಿಯಾಗಿದೆ. ಇದರ ಪರಿಣಾಮ ಕೆಎಸ್​​ಆರ್​ಟಿಸಿ, ಬಿಎಂಟಿಸಿ ಬಸ್​ಗಳಿಲ್ಲದೆ ಪ್ರಯಾಣಿಕರು ಭಾರಿ ಪರದಾಟ ನಡೆಸಿದ್ರು. ಕೆಲವೊಂದು ಕಡೆ ಒಂದೆರಡು ಬಸ್​ಗಳನ್ನ ರೋಡಿಗೆ ಬಿಟ್ಟರೂ ಚಾಲಕರು ಹೆದರಿಕೊಂಡೇ ಬಸ್​ ಚಲಾಯಿಸಿದ್ರು. ಇನ್ನೂ ಕೆಲವೆಡೆ ಬಸ್​ಗಳಿಗೆ ಎಸ್ಕಾರ್ಟ್ ನೀಡಲಾಯ್ತು. ಸಾರಿಗೆ ನೌಕರರ ಮುಷ್ಕರದಿಂದ ಬೆಂಗಳೂರಿನಲ್ಲಿ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್​ ನಿಲ್ದಾಣಗಳಿಗೆ ಖಾಸಗಿ ಬಸ್​ಗಳು ಎಂಟ್ರಿಕೊಟ್ವು. ಉಳಿದಂತೆ ಪ್ರಯಾಣಿಕರು ಆಟೋ, ಕ್ಯಾಬ್​ಗಳ ಮೊರೆ ಹೋದ್ರು. ಇನ್ನು ರಾಜ್ಯ ಸರ್ಕಾರ ತಮ್ಮ ಬೇಡಿಕೆ ಈಡೇರಿಸದೇ ಇರೋದ್ರಿಂದ, ಅಥವಾ ಈ ಬಗ್ಗೆ ಸರಿಯಾದ ಭರವಸೆ ಕೊಡದೇ ಇರೋದ್ರಿಂದ ನಾಳೆಯೂ ಮುಷ್ಕರ ಮುಂದುವರಿಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ.

ಹೀಗಾಗಿ ಇವತ್ತಿನ ಸಮಸ್ಯೆ ನಾಳೆಯೂ ಕಂಟಿನ್ಯೂ ಆಗೋದ್ರಲ್ಲಿ ಅನುಮಾನವಿಲ್ಲ. ನಾಳೆಯೂ ಸಮಸ್ಯೆ ಬಗೆಹರಿಯದಿದ್ರೆ ಸಾರಿಗೆ ನೌಕರರ ಮುಷ್ಕರ ಅನಿರ್ಧಿಷ್ಟಾವಧಿವರೆಗೆ ಮುಂದುವರಿಯೋ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಮಾತನಾಡಿರೋ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, 9 ಬೇಡಿಕೆಗಳಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ ಅಂತ ಸರ್ಕಾರ ಹೇಳ್ತಿದೆ. ಆದ್ರೆ ಲೋಪಗಳಿಂದ ಕೂಡಿರೋ 8 ಬೇಡಿಕೆಗಳಿಗಿಂತ ನಮಗೆ 9ನೇ ಬೇಡಿಕೆಯೇ ತುಂಬಾ ಮುಖ್ಯ. ಆ 9ನೇ ಬೇಡಿಕೆಯೇ 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ತರೋದು ಎಂದಿದ್ದಾರೆ. ಆದ್ರೆ ರಾಜ್ಯ ಸರ್ಕಾರ ಈಗಾಗಲೇ 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ತರಲು ಸಾಧ್ಯವೇ ಇಲ್ಲ ಅಂತ ಹೇಳಿರೋದ್ರಿಂದ ಈ ಸಮಸ್ಯೆ ಬಗೆಹರಿಯೋದಾದ್ರೂ ಹೇಗೆ ಅನ್ನೋ ಪ್ರಶ್ನೆ ರಾಜ್ಯದ ಜನರನ್ನ ಕಾಡ್ತಿದೆ.

-masthmagaa.com

Contact Us for Advertisement

Leave a Reply