ಡಿಸೆಂಬರ್ 5ಕ್ಕೆ ಉಪಚುನಾವಣೆ..ಡಿ.9ಕ್ಕೆ ಫಲಿತಾಂಶ

ಶಾಸಕರು ಅನರ್ಹವಾಗಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಉಪಚುನಾವಣೆ ನಡೆಯಲಿದೆ. ಮೊನ್ನೆಯಷ್ಟೇ ಚುನಾವಣೆ ಮುಂದೂಡಿದ್ದ ಆಯೋಗ ಈಗ ಪುನಃ ಚುನಾವಣಾ ದಿನಾಂಕ ಘೋಷಿಸಿದೆ.

ಚುನಾವಣೆಯ ಪ್ರಕ್ರಿಯೆ ಹೀಗಿರಲಿದೆ…

ನ. 11ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ
ನ. 18 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ
ನ. 19 ನಾಮಪತ್ರ ಪರಿಶೀಲನೆ
ನ. 21 ನಾಮಪತ್ರ ವಾಪಾಸ್ ಗೆ ಕೊನೆ ದಿನ
ಡಿ. 5ರಂದು ಮತದಾನ
ಡಿ. 9ರಂದು ಫಲಿತಾಂಶ

ಇನ್ನು ಕಾಗವಾಡ, ಕೆಆರ್ ಪೇಟೆ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ಅಥಣಿ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ರಾಣಿಬೆನ್ನೂರು, ವಿಜಯನಗರ, ಶಿವಾಜಿನಗರ, ಹೊಸಕೋಟೆ, ಹುಣಸೂರು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

ಅಕ್ಟೋಬರ್ 21ರಂದು ಉಳಿದ ರಾಜ್ಯಗಳ ಚುನಾವಣೆ ಜೊತೆಗೇ ರಾಜ್ಯದಲ್ಲೂ ಉಪಚುನಾವಣೆ ಘೋಷಿಸಲಾಗಿತ್ತು. ಆದ್ರೆ ಅನರ್ಹರ ಅರ್ಜಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಉಪಚುನಾವಣೆಯನ್ನು ಮುಂದೂಡುವಂತೆ ಸೂಚಿಸಿತ್ತು. ಹೀಗಾಗಿ ಚುನಾವಣಾ ಆಯೋಗ ಹೊಸ ದಿನಾಂಕವನ್ನು ಘೋಷಿಸಿದೆ.

Contact Us for Advertisement

Leave a Reply