ರಾಜ್ಯದಲ್ಲಿ ಆನ್​ಲೈನ್ ಜೂಜಾಟ ನಿಷೇಧ ಫಿಕ್ಸ್​!

masthmagaa.com:

ರಾಜ್ಯದಲ್ಲಿ ಆನ್​​ಲೈನ್​ ಜೂಜಾಟವನ್ನ ನಿಷೇಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇವತ್ತು ನಡೆದ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಆನ್​ಲೈನ್​ ಜೂಜಾಟ ನಿಷೇಧಿಸುವ ಸಂಬಂಧ ಈಗಾಗಲೇ ಹೈ ಕೋರ್ಟ್​​ ಸೂಚನೆ ಕೊಟ್ಟಿದೆ. ಈ ಹಿನ್ನೆಲೆ ಆನ್​ಲೈನ್​ ಜೂಜು ನಿಯಂತ್ರಣಕ್ಕೆ ಪೂರಕವಾಗಿ ಕರ್ನಾಟಕ ಪೊಲೀಸ್​ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಸಚಿವ ಸಂಪುಟ ಅನುಮೋದನೆ ಕೊಟ್ಟಿದೆ. ಇದನ್ನ ಮುಂದಿನ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುತ್ತೆ ಅಂದ್ರು.

-masthmagaa.com

Contact Us for Advertisement

Leave a Reply