ರಾಜ್ಯದಲ್ಲಿ ಮಳೆಹಾನಿಗೆ ಪರಿಹಾರ ಹೇಗಿದೆ ಗೊತ್ತಾ?

masthmagaa.com:

ಬೆಂಗಳೂರು: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸುರೀತಿರೋ ಮಳೆಗೆ ಇದುವರೆಗೆ 24 ಜನ ಪ್ರಾಣ ಕಳ್ಕೊಂಡಿದ್ದಾರೆ ಅಂತ ಮುಖ್ಯಮಂತ್ರಿ ಕಚೇರಿ ಮಾಹಿತಿ ನೀಡಿದೆ. ಜೊತೆಗೆ 5 ಲಕ್ಷ ಹೆಕ್ಟೇರ್​ಗೂ ಹೆಚ್ಚು​ ಪ್ರದೇಶದ ಬೆಳೆ ಹಾನಿಯಾಗಿದೆ. 658 ಮನೆಗಳಿಗೆ ಸಂಪೂರ್ಣ ಹಾನಿಯಾಗಿದೆ. 8,495 ಮನೆಗಳಿಗೆ ಭಾಗಶಃ ಹಾನಿಯಾಗಿದೆ. 191 ಜಾನುವಾರುಗಳು ಸತ್ತಿವೆ ಅಂತ ಅಂಕಿಅಂಶ ನೀಡಿದೆ. ಇನ್ನು ಅಕಾಲಿಕ ಮಳೆಯಿಂದಾದ ಹಾನಿ ಬಗ್ಗೆ ಭಾನುವಾರ ರಾತ್ರಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದಿದೆ. ಈ ವೇಳೆ ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಇನ್ನು ಮಳೆಯಿಂದಾದ ಹಾನಿ ಬಗ್ಗೆ ಮಾತನಾಡಿರೋ ಸಿಎಂ ಬಸವರಾಜ ಬೊಮ್ಮಾಯಿ, ಸಂಪೂರ್ಣವಾಗಿ ಮನೆ ಬಿದ್ದವರಿಗೆ ಪರಿಹಾರವಾಗಿ ಮೊದಲ ಕಂತಿನಲ್ಲಿ ಕೂಡಲೇ ಒಂದು ಲಕ್ಷ ಬಿಡುಗಡೆ ಮಾಡುವಂತೆ ಸೂಚಿಸಿದ್ದೇನೆ. ಪೂರ್ಣ ಪ್ರಮಾಣದಲ್ಲಿ ಮನೆ ಬಿದ್ದವರಿಗೆ ಮೂರು ಹಂತದಲ್ಲಿ ಒಟ್ಟು 5 ಲಕ್ಷ ರೂಪಾಯಿ ಪರಿಹಾರ ಕೊಡಲಾಗುತ್ತೆ. ಭಾಗಶಃ ಮನೆ ಬಿದ್ದೋರಿಗೂ ಮೊದಲ ಕಂತಿನಲ್ಲಿ 1 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗುತ್ತೆ. ಇವರಿಗೆ ಒಟ್ಟು 3 ಲಕ್ಷ ರೂಪಾಯಿ ಕೊಡಲಾಗುತ್ತೆ. ಅಲ್ಪ ಪ್ರಮಾಣದಲ್ಲಿ ಮನೆ ಬಿದ್ದವರಿಗೆ 50 ಸಾವಿರ ರೂಪಾಯಿ ಪರಿಹಾರ ಕೊಡಲಾಗುತ್ತೆ ಎಂದಿದ್ದಾರೆ. ಇವತ್ತಿನಿಂದಲೇ ಬೆಳೆ ಹಾನಿ ಬಗ್ಗೆಯೂ ಸಮೀಕ್ಷೆಯನ್ನ ಯುದ್ಧೋಪಾದಿಯಲ್ಲಿ ನಡೆಸಲು ಸೂಚಿಸಿದ್ದೀವಿ. ಸರ್ವೆ ನಡೆಸಿದ ವರದಿಯನ್ನ ಸರ್ವೆ ಆದಂಗೆ ಆದಂಗೆ ಅಪ್ಲೋಡ್​ ಮಾಡ್ಬೇಕು. ಅದರ ಪ್ರಕಾರ ಆಧರಿಸಿ ಪರಿಹಾರ ಬಿಡುಗಡೆ ಮಾಡ್ತೀವಿ. ಇನ್ನುಳಿದಂತೆ ರಸ್ತೆ ಮತ್ತು ಸೇತುವೆ ರಿಪೇರಿಗೆ 500 ಕೋಟಿ ರೂಪಾಯಿ ಕೊಟ್ಟಿದ್ದೀವಿ ಎಂದಿದ್ದಾರೆ. ಇನ್ನು ಸಿಎಂ ಬೊಮ್ಮಾಯಿ ಇವತ್ತು ಮಳೆಯಿಂದ ಹಾನಿಗೊಳಗಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ವರದಾಪುರ ಕಾಲೋನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

-masthmagaa.com

Contact Us for Advertisement

Leave a Reply