ಶಕ್ತಿ ಯೋಜನೆಗೆ ಮೀಸಲಿಟ್ಟ ಹಣ ಆರೇ ತಿಂಗಳಿಗೆ ಖಾಲಿ!

masthmagaa.com:

ಮಹಿಳೆಯರಿಗೆ ಉಚಿತ ಬಸ್‌ ವ್ಯವಸ್ಥೆ ಕಲ್ಪಿಸುವ ಕಾಂಗ್ರೆಸ್‌ನ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಮೀಸಲಿಟ್ಟ ಹಣ ಆರೇ ತಿಂಗಳಿಗೆ ಖಾಲಿಯಾಗ್ತಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ಈ ಯೋಜನೆಗೆ ಸಿಎಂ ಸಿದ್ಧರಾಮಯ್ಯ ಬಜೆಟ್‌ನಲ್ಲಿ 2,800 ಕೋಟಿ ರೂಪಾಯಿಯನ್ನ ಮೀಸಲಿಟ್ಟಿದ್ರು. ಆದ್ರೆ ನವಂಬರ್‌ 5ರವರೆಗೆ ಮಹಿಳಾ ಪ್ರಯಾಣಿಕರ ಶೂನ್ಯ ಟಿಕೆಟ್‌ನ ಮೌಲ್ಯ 2,143 ಕೋಟಿ ರೂಪಾಯಿ ತಲುಪಿದೆ. ಈ ಹಣಕಾಸು ವರ್ಷ ಮುಗಿಯೋಕೆ ಇನ್ನು 5 ತಿಂಗಳು ಬಾಕಿಯಿದ್ದು, ಬಜೆಟ್‌ನಲ್ಲಿ ಮೀಸಲಿಟ್ಟ ಹಣ ಡಿಸೆಂಬರ್‌ವರೆಗೆ ಬರಬಹುದು ಅಂತ ಸಾರಿಗೆ ನಿಗಮಗಳು ಹೇಳಿವೆ. ಇದರ ಬೆನ್ನಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿ, ಡಿಸೆಂಬರ್‌ನಲ್ಲಿ ಶಕ್ತಿ ಯೋಜನೆಗೆ ಹೆಚ್ಚಿನ ಅನುದಾನ ನೀಡಲಾಗುತ್ತೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply