masthmagaa.com:

ಬ್ರಿಟನ್​ನಲ್ಲಿ ರೂಪಾಂತರಿ ಕೊರೋನಾ ವೈರಸ್ ಕಾಣಿಸಿಕೊಂಡಿರೋದ್ರಿಂದ ರಾಜ್ಯದಲ್ಲಿ ಜನವರಿ 1ರಿಂದಲೇ ಶಾಲೆಗಳನ್ನ ತೆರೆಯಲಾಗುತ್ತಾ ಅನ್ನೋ ಅನುಮಾನ ಮಕ್ಕಳು ಮತ್ತು ಪೋಷಕರಲ್ಲಿ ಇದೆ. ಈ ಸಂಬಂಧ ಇವತ್ತು ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ‘ಮಕ್ಕಳ ಆರೋಗ್ಯದ ಜೊತೆಗೆ ಅವರ ಶೈಕ್ಷಣಿಕ ಭವಿಷ್ಯವನ್ನ ರೂಪಿಸೋದು ಕೂಡ ನಮ್ಮ ಜವಾಬ್ದಾರಿ. ಜನವರಿ 1ರಿಂದ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನ ತೆರೆಯಲಾಗುತ್ತೆ. 6ರಿಂದ 9ನೇ ತರಗತಿ ಮಕ್ಕಳಿಗೆ ವಿದ್ಯಾಗಮ ವ್ಯವಸ್ಥೆ ಜಾರಿಯಾಗುತ್ತೆ. ಡಿಸೆಂಬರ್ 28 ಮತ್ತು 29ರಂದು ಮತ್ತೊಮ್ಮೆ ಸಭೆ ನಡೆಸುತ್ತೇವೆ. ಬ್ರಿಟನ್​ನಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಾಣುವಿನ ಹೊಸ ಪ್ರಭೇದ ಶಾಲೆಗಳನ್ನ ತೆರೆಯುವುದರ ಮೇಲೆ ಏನೂ ಪರಿಣಾಮ ಬೀರಲ್ಲ ಅಂದ್ರೆ ಈಗಾಗಲೇ ನಿಗದಿಪಡಿಸಿದಂತೆ ಜನವರಿ 1ರಿಂದ ಶಾಲೆಗಳನ್ನ ತೆರೆಯಲಾಗುತ್ತೆ’ ಅಂತ ಹೇಳಿದ್ರು.

ಇನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್​. ಸುರೇಶ್ ಕುಮಾರ್ ಮಾತನಾಡಿ, ‘ಸುರೇಶ್ ಕುಮಾರ್ ಅವರು ಹಠಕ್ಕೆ ಬಿದ್ದು ಶಾಲೆಗಳನ್ನ ತೆರೆಯಲು ಮುಂದಾಗಿದ್ದಾರೆ. ನನ್ನ ಮತ್ತು ಡಾ.ಕೆ. ಸುಧಾಕರ್ ನಡುವೆ ಜಂಗೀಕುಸ್ತಿ ನಡೀತಿದೆ ಅಂತ ಕೆಲ ಮಾಧ್ಯಮಗಳು ವರದಿ ಮಾಡ್ತಿವೆ. ಅದೆಲ್ಲಾ ಸುಳ್ಳು. ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಇಲಾಖೆ ಸಮನ್ವಯತೆಯಿಂದ ಕೆಲಸ ಮಾಡ್ತಿದೆ. ಹೈಕೋರ್ಟ್​ ಕೂಡ ಕೊರೋನಾ ಇಲ್ಲದಕಡೆ ಶಾಲೆಗಳನ್ನ ತೆರೆಯಿರಿ ಅಂತ ಹೇಳಿದೆ. ತಾಂತ್ರಿಕ ಸಲಹಾ ಸಮಿತಿ ಕೂಡ ಕೆಲವೊಂದು ಸಲಹೆಗಳನ್ನ ಕೊಟ್ಟಿದೆ. ಅದರ ಪ್ರಕಾರ ಶಾಲೆಗಳನ್ನ ತೆರೆಯುತ್ತೀವಿ’ ಅಂತ ಹೇಳಿದ್ರು.

-masthmagaa.com

Contact Us for Advertisement

Leave a Reply