ರಾಜ್ಯದಲ್ಲಿ 1ರಿಂದ 5ನೇ ತರಗತಿ ಶಾಲೆ ಶುರು! ಯಾವಾಗಿಂದ ಗೊತ್ತಾ?

masthmagaa.com:

ಕೊರೋನಾ ಹಾವಳಿಯಿಂದ ರಾಜ್ಯದಲ್ಲಿ ಬಂದ್ ಆಗಿದ್ದ 1ರಿಂದ 5ನೇ ತರಗತಿಗಳು ಅಕ್ಟೋಬರ್ 25ನೇ ತಾರೀಖಿನಿಂದ ಓಪನ್ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಕೊರೋನಾ ಕೇಸಸ್ ಕಮ್ಮಿಯಾದ ಮತ್ತು ಪಾಸಿಟಿವಿಟಿ ರೇಟ್​ ಕಮ್ಮಿಯಾದ ಹಿನ್ನೆಲೆ ಶಾಲೆ ಆರಂಭ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಕೆಲವೊಂದು ವಿನಾಯ್ತಿ ನೀಡಲು ಕೊರೋನಾ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅದರಂತೆ ಅಕ್ಟೋಬರ್ 25ರಿಂದ 1ರಿಂದ 5ನೇ ತರಗತಿ ಮಕ್ಕಳಿಗೆ 50 ಪರ್ಸೆಂಟ್​ ಕೆಪಾಸಿಟಿಯೊಂದಿಗೆ ಶಾಲೆ ಓಪನ್ ಮಾಡಲಾಗ್ತಿದೆ. ಶಾಲೆಗೆ ಬರುವ ಮಕ್ಕಳು ಪೋಷಕರಿಂದ ಅನುಮತಿ ಪತ್ರ ತರಬೇಕು. ಶಾಲೆಯ ಎಂಟ್ರಾನ್ಸ್​ನಲ್ಲಿ ಕೊರೋನಾ ಲಕ್ಷಣಗಳ ಸ್ಕ್ರೀನಿಂಗ್ ನಡೆಸಬೇಕು. ಹ್ಯಾಂಡ್​ ಸ್ಯಾನಿಟೈಸರ್​ ವ್ಯವಸ್ಥೆ ಮಾಡಬೇಕು, ದೈಹಿಕ ಅಂತರ ಕಾಪಾಡಬೇಕು. ಎಂಟ್ರಾನ್ಸ್ ಮತ್ತು ಎಕ್ಸಿಟ್​​ನಲ್ಲಿ ಮಕ್ಕಳ ಗುಂಪು ಗೂಡುವಿಕೆಗೆ ಅವಕಾಶ ಕೊಡಬಾರ್ದು. ಎರಡೂ ಡೋಸ್​ ಕೊರೋನಾ ಲಸಿಕೆ ಹಾಕಿಸಿದ ಶಿಕ್ಷಕರು ಮತ್ತು ಸಿಬ್ಬಂದಿಗೆ ಮಾತ್ರ ಅನುಮತಿ ನೀಡಬೇಕು. 50 ವರ್ಷ ಮೇಲ್ಪಟ್ಟ ಶಿಕ್ಷಕರು ಹೆಚ್ಚುವರಿಯಾಗಿ ಫೇಸ್ ಶೀಲ್ಡ್​ ಅನ್ನ ಧರಿಸಬೇಕು. ಉಳಿದಂತೆ ಏನೆಲ್ಲಾ ಮುಂಜಾಗ್ರತೆ ವಹಿಸಬೇಕು ಅನ್ನೋದಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಶಿಕ್ಷಣ ಇಲಾಖೆ ಮಾರ್ಗಸೂಚಿಯನ್ನ ಪ್ರಕಟಿಸಲಿದೆ ಅಂತ ಸರ್ಕಾರ ಹೇಳಿದೆ. ಇನ್ನು ಸ್ವಿಮ್ಮಿಂಗ್​ ಪೂಲ್​​ಗಳನ್ನ 50 ಪರ್ಸೆಂಟ್​ ಕೆಪಾಸಿಟಿಯೊಂದಿಗೆ ಓಪನ್ ಮಾಡಲು ಅವಕಾಶ ನೀಡಲಾಗಿದೆ. ಆದ್ರೆ ಎರಡೂ ಡೋಸ್​ ಲಸಿಕೆ ಹಾಕಿಸಿಕೊಂಡು ಬರುವವರಿಗೆ ಮಾತ್ರ ಅವಕಾಶ. ಏರ್​ಪೋರ್ಟ್​ಗಳಲ್ಲಿ ಆರ್​ಟಿ ಪಿಸಿಆರ್​ ಟೆಸ್ಟ್ ರಿಪೋರ್ಟ್ ಅನ್ನ ಪರಿಶೀಲಿಸುವ ಬದಲು ವಿದೇಶದಿಂದ ಬರುವ ಪ್ರಯಾಣಿಕರು ಆರ್​ಟಿ ಪಿಸಿಆರ್​ ರಿಪೋರ್ಟ್ ಅನ್ನ ಏರ್ ಸುವಿದಾ ಪೋರ್ಟಲ್​​ನಲ್ಲಿ ಅಪ್​ಲೋಡ್​ ಮಾಡಬೇಕು. ಸಂಬಂಧಪಟ್ಟ ಏರ್​ಲೈನ್ ಕಂಪನಿ ಅದನ್ನ ಪರಿಶೀಲಿಸಬೇಕು ಅಂತ ಸೂಚಿಸಲಾಗಿದೆ. ಯುನೈಟೆಡ್​​ ಕಿಂಗ್ಡಂನಿಂದ ಬರುವ ಪ್ರಯಾಣಿಕರಿಗೆ ಕೇಂದ್ರ ಸರ್ಕಾರ ಸೂಚಿಸಿದ ನಿಯಮಗಳು ಮುಂದುವರಿಯುತ್ತೆ ಅಂತಾನೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

-masthmagaa.com

Contact Us for Advertisement

Leave a Reply