ಯುದ್ಧಕ್ಕೆ ಕನ್ನಡಿಗ ಬಲಿ.. ತಿಂಡಿ ತರಲು ಹೋದಾತ ಬರಲೇ ಇಲ್ಲ!

masthmagaa.com:

ಯುಕ್ರೇನ್ ರಷ್ಯಾ ಸಂಘರ್ಷಕ್ಕೆ ಭಾರತೀಯನ ಬಲಿಯಾಗಿದೆ. ಅದ್ರಲ್ಲೂ ಕನ್ನಡಿಗರೇ ಆದ ವಿದ್ಯಾರ್ಥಿ ನವೀನ್ ಶೇಖರಪ್ಪ ಗ್ಯಾನಗೌಡರ್​ ಅನ್ನೋರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಇವರು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನ ಚಳಗೇರಿ ಗ್ರಾಮದವರು ಅಂತ ಕೂಡ ಮಾಹಿತಿ ಸಿಕ್ಕಿದೆ. ಖಾರ್ಕೀವ್​​​​ನಲ್ಲಿ ಇಂದು ಬೆಳಗ್ಗೆ ಈ ದುರಂತ ಸಂಭವಿಸಿದೆ ಅಂತ ವಿದೇಶಾಂಗ ಕಾರ್ಯದರ್ಶಿ ಅರಿಂದಂ ಭಗ್ಚಿ ಕೂಡ ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಇದ್ರ ಬೆನ್ನಲ್ಲೇ ಭಾರತದ ವಿದೇಶಾಂಗ ಇಲಾಖೆ ಭಾರತದಲ್ಲಿರೋ ಯುಕ್ರೇನ್ ಮತ್ತು ರಷ್ಯಾ ರಾಯಭಾರಿ ಜೊತೆಗೆ ಮಾತನಾಡಿದ್ದು, ಭಾರತೀಯ ನಾಗರಿಕರ ಸುರಕ್ಷಿತ ಸ್ಥಳಾಂತರಕ್ಕೆ ಅವಕಾಶ ಮಾಡಿಕೊಡಬೇಕು ಅನ್ನೋ ಬೇಡಿಕೆ ಇಟ್ಟಿದ್ದಾರೆ. ಜೊತೆಗೆ ರಷ್ಯಾ ಮತ್ತು ಯುಕ್ರೇನ್​ನಲ್ಲಿರೋ ನಮ್ಮ ರಾಯಭಾರಿಗಳು ಕೂಡ ಈ ವಿಚಾರವಾಗಿ ಕೆಲಸ ಮಾಡ್ತಿದ್ದಾರೆ ಅಂತ ಮಾಹಿತಿ ನೀಡಿದ್ದಾರೆ.

ಇನ್ನು ನವೀನ್ ಖಾರ್ಕೀವ್ ಮೆಡಿಕಲ್ ಯುನಿವರ್ಸಿಟಿಯಲ್ಲಿ 4th ಇಯರ್ ಸ್ಟೂಡೆಂಟ್ ಆಗಿದ್ದು, ಐವರು ಸ್ನೇಹಿತರ ಜೊತೆಗೆ ವಾಸಿಸ್ತಿದ್ರು .

ಈ ಬಗ್ಗೆ ಪ್ರತಿಕ್ರಿಯಿಸಿರೋ ಖಾರ್ಕೀವ್​​ನ ಸ್ಟೂಡೆಂಟ್ ಕೋಆರ್ಡಿನೇಟರ್, ಫೈನಲ್ ಇಯರ್ ಸ್ಟೂಡೆಂಟ್​​​​ ಪೂಜಾ ಪ್ರಹರಾಜ್​​​, ಹಾಸ್ಟೆಲ್​ನಲ್ಲಿರೊ ಇತರರಿಗೆ ನಾವು ಫುಡ್ ನೀಡಿದ್ವಿ. ಆದ್ರೆ ನವೀನ್ ಹಾಸ್ಟೆಲ್​ನಲ್ಲಿ ಇರಲಿಲ್ಲ. ಗವರ್ನರ್​ ಹೌಸ್ ಹತ್ತಿರದ ಫ್ಲಾಟ್ ಒಂದ್ರಲ್ಲಿ ವಾಸಿಸ್ತಿದ್ದ. ಬೆಳಗ್ಗೆ ತಿಂಡಿ ತರಲು ಹೋಗಿದ್ದ ನವೀನ್​​ ಹಲವು ಗಂಟೆಗಳ ಕಾಲ ಕ್ಯೂನಲ್ಲಿ ನಿಂತಿದ್ದ. ಈ ವೇಳೆ ಸಡನ್ ಆಗಿ ಗವರ್ನರ್ ಹೌಸ್ ಮೇಲೆ ದಾಳಿ ನಡೀತು. ಇದ್ರಲ್ಲಿ ನವೀನ್ ಕೂಡ ಪ್ರಾಣ ಬಿಟ್ಟಿದ್ದಾನೆ ಅಂತ ಹೇಳಿದ್ದಾರೆ.

ಅಂದಹಾಗೆ ಭಾನುವಾರ ರಷ್ಯನ್ ಸೇನೆ ಖಾರ್ಕೀವ್ ನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಯುಕ್ರೇನ್ ಸೈನಿಕರು ಕೂಡ ಫುಲ್ ಫೈಟ್ ಕೊಡ್ತಿದ್ದಾರೆ. ನಗರಕ್ಕೆ ಎಂಟ್ರಿ ಕೊಟ್ಟು 3 ದಿನ ಆದ್ರೂ ಅದನ್ನ ಕಂಟ್ರೋಲ್​ಗೆ ತಗೊಳ್ಳಕ್ಕೆ ರಷ್ಯನ್ ಸೈನಿಕರಿಗೆ ಆಗಿಲ್ಲ.. ಇದು ಯುಕ್ರೇನ್​ನ 2ನೇ ಅತಿದೊಡ್ಡ ನಗರವಾಗಿದೆ.

ಯುಕ್ರೇನ್-ರಷ್ಯಾ ಸಂಘರ್ಷ ಭಯಾನಕ ರೂಪ ಪಡ್ಕೊಳ್ತಿದ್ದು, ಕನ್ನಡಿಗ ವಿದ್ಯಾರ್ಥಿಯೊಬ್ಬರು ಪ್ರಾಣ ಕಳ್ಕೊಂಡಿದ್ದಾರೆ. ಖಾರ್ಕೀವ್​ ನಗರದಲ್ಲಿದ್ದ ಇವರು 4th ಇಯರ್​​ನಲ್ಲಿ ಓದ್ತಾ ಇದ್ರು.. ಯುಕ್ರೇನ್‌ನಲ್ಲಿ ಮೃತಪಟ್ಟ ನವೀನ ಜೊತೆಗೆ ಇದ್ದ ಅವರ ಸ್ನೇಹಿತ ಅಮಿತ್‌ ಮಾತಾಡಿ, ನಾನು ಅವ್ನು ಒಟ್ಟಿಗೆ ಬಂಕರ್‌ನಲ್ಲೇ ಇದ್ವಿ, ನಾನು ರಾತ್ರಿ ಲೇಟ್‌ ಆಗಿ ಮಲ್ಕೊಂಡೆ ಅದ್ಕೆ ಬೆಳಗ್ಗೆ 8 ಗಂಟೆಗೆ ಎದ್ದೆ. ಆದ್ರೆ ನವೀನ್‌ 6 ಗಂಟೆಗೆನೇ ಎದ್ದಿದ್ದ. ತಿನ್ನಲು ಏನು ಇರದೇ ಇದ್ದಿದ್ರಿಂದ ಹತ್ತಿರದಲ್ಲೇ ಇದ್ದ ಸೂಪರ್‌ ಮಾರ್ಕೆಟ್‌ಗೆ ಹೋಗಿ ಏನಾದ್ರು ತಗೊಂಡು ಬರನಾ ಅಂತ ಆಚೆ ಹೋಗಿದ್ದ. ಆದ್ರೆ ಅಲ್ಲಿ ದೊಡ್ಡ ಕ್ಯೂ ಇತ್ತು ಅಂತ ಅಲ್ಲೇ ವೇಟ್‌ ಮಾಡ್ತಿದ್ದ. ಇನ್ನು 7:50ಕ್ಕೆ ಮೆಸೇಜ್‌ ಮಾಡಿ ಅಮೌಂಟ್‌ ಶಾರ್ಟೇಜ್‌ ಇದೆ ಕಳಿಸು ಅಂತ ಹೇಳ್ದ ನಾನು ಕಳ್ಸಿದ್ದೆ. ಆದ್ರೆ ತಿರ್ಗಾ ಕಾಲ್‌ ಮಾಡ್ಲಿಲ್ಲ ಅಂತ ಹೇಳಿ 8:10ಕ್ಕೆ ಕಾಲ್‌ ಮಾಡ್ದಾಗ ಯಾರೋ ಯುಕ್ರೇನ್‌ ಮಹಿಳೆ ಪಿಕ್‌ ಮಾಡಿದ್ರು ಆಗ ನಾನು ನಮ್ಮ ಬಂಕರ್‌ನಲ್ಲಿ ಇಂಗ್ಲಿಷ್‌ ಮತ್ತು ಯಕ್ರೇನಿಯನ್‌ ಮಾತಾಡೋ ಒಬ್ರಿಗೆ ಫೋನ್‌ ಕೊಟ್ಟೆ. ಅವ್ರು ಮಾತಾಡಿದಾಗ ಆ ಮಹಿಳೆ ಹಿ ಈಸ್‌ ನೋ ಮೋರ್‌ ಅಂತ ಹೇಳಿದ್ರು ಅಂತ ಘಟನೆಯನ್ನು ವಿವರಿಸಿದ್ರು.

ಇನ್ನು ನವೀನ್ ಕುಟುಂಬಸ್ಥರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಮಾತಾಡಿದ್ದಾರೆ. ನವೀನ್ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಸಿಎಂ ಬಸವರಾಜ್ ಬೊಮ್ಮಾಯಿ ಮಾತನಾಡಿ, ಮೃತ ನವೀನ್ ಕುಟುಂಬಸ್ತರ ಜೊತೆ ನಾನು ಮಾತಾಡಿದ್ದೀನಿ. ನನಗೆ ತುಂಬಾ ಬೇಕಾಗಿದ್ದ ಕುಟುಂಬ.. ಇದೇ ಊರಿನ ಮತ್ತಿಬ್ಬರು ಗಾಯಗೊಂಡಿದ್ದಾರೆ. ಈಗಾಗಲೇ ವಿದೇಶಾಂಗ ಇಲಾಖೆ ಜೊತೆ ಮಾತಾಡಿದ್ದು, ನವೀನ್ ಮೃತದೇಹ ತರೋ ಬಗ್ಗೆ ಚರ್ಚಿಸಿದ್ದೀನಿ. ವಾರ್ ಝೋನ್ ಇರೋದ್ರಿಂದ ಅಲ್ಲಿ ಯಾವ ಪರಿಸ್ಥಿತಿ ಇದೆ? ದೇಹದ ಸ್ಥಿತಿ ಹೇಗಿದೆ ಅನ್ನೋದು ಗೊತ್ತಿಲ್ಲ.. ಇವತ್ತೇ ಅಲ್ಲದಿದ್ರೂ ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮೃತದೇಹ ರವಾನೆಗೆ ಪ್ರಯತ್ನಿಸ್ತೀವಿ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply