3 ದಿನಗಳ ಕಲಾಪ.. ಕೊನೆಯ ದಿನ ಶಾಸಕರ ಗೈರು..!

ವಿಧಾನಸಭೆ ಅಧಿವೇಶನದ ಕೊನೆಯ ದಿನವಾದ ಇಂದು ತುಂಬಾ ಜನ ಶಾಸಕರು ಅಧಿವೇಶನಕ್ಕೆ ಗೈರಾಗಿದ್ದಾರೆ. ಸದನದಲ್ಲಿ ಕೇವಲ 80 ಮಂದಿ ಶಾಸಕರು ಹಾಜರಾಗಿದ್ದಾರೆ. ಬಿಜೆಪಿಯ 53, ಕಾಂಗ್ರೆಸ್‍ನ 20, ಜೆಡಿಎಸ್‍ನ 7 ಮಂದಿ ಶಾಸಕರು ಮಾತ್ರ ಸದನದಲ್ಲಿ ಹಾಜರಾಗಿದ್ದಾರೆ.

ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ 3 ದಿನಗಳ ಕಲಾಪಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಕಲಾಪ ಮುನ್ನಡೆಸುವಂತೆ ಇವತ್ತು ಸಹ ಪಟ್ಟು ಮುಂದುವರಿಸಿದ್ದಾರೆ. ಇವತ್ತು ಮಾತನಾಡಿದ ಅವರು, ವಿತ್ತೀಯ ಕಲಾಪಕ್ಕೆ ಸಮಯ ಬೇಕು. ನಂತರ ಪ್ರತಿಯೊಂದು ಬೇಡಿಕೆಗಳ ಮೇಲೆ ಚರ್ಚೆ ನಡೆಸಿ, ಅನುಮೋದನೆ ಪಡೆಯಬೇಕು. ಆಮೇಲೆ ಮತಕ್ಕೆ ಹಾಕಿ ಎಂದು ಪಟ್ಟು ಹಿಡಿದ್ರು.

Contact Us for Advertisement

Leave a Reply