ಮುಂದೊಂದು ವಾರ ಕರ್ನಾಟಕ ಕಂಪ್ಲೀಟ್ ಲಾಕ್​ಡೌನ್!

masthmagaa.com:

ಈ ನಡುವೆ ರಾಜ್ಯದಲ್ಲೂ ಕಂಪ್ಲೀಟ್ ಲಾಕ್​ಡೌನ್ ಮಾಡ್ತಾರಾ ಅನ್ನೋ ಚರ್ಚೆ ಶುರುವಾಗಿದೆ. ವೀಕೆಂಡ್ ಲಾಕ್​ಡೌನ್ ಯಶಸ್ವಿಯಾದ್ರೂ, ಕೊರೋನಾ ನಿರಂತರವಾಗಿ ಏರುತ್ತಲೇ ಇದೆ. ಸೋ ವೀಕೆಂಡ್ ಲಾಕ್​​ಡೌನ್ ರೀತಿಯೇ ಕಂಪ್ಲೀಟ್ ಲಾಕ್​ಡೌನ್ ಮಾಡುವ ಬಗ್ಗೆ ನಾಳೆಯ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯಲಿದೆ. ಜೊತೆಗೆ ರಾಜ್ಯದಲ್ಲಿ 18ರಿಂದ 45 ವರ್ಷದವರಿಗೆ ಉಚಿತವಾಗಿ ಲಸಿಕೆ ನೀಡುವ ಬಗ್ಗೆಯೂ ಚರ್ಚೆ ನಡೆಯಲಿದೆ. ಈ ಬಗ್ಗೆ ಪ್ರಕ್ರಿಯಿಸಿದ ಸಚಿವ ಜಗದೀಶ್ ಶೆಟ್ಟರ್​, ವೀಕೆಂಡ್ ಲಾಕ್​​​ಡೌನ್ ಮುಂದಿನ ವಾರವೂ ಇರುತ್ತೆ. ಜೊತೆಗೆ ಮಾರ್ಗಸೂಚಿಯಂತೆ ಕಠಿಣ ನಿಯಮಗಳು ಮುಂದುವರಿಯುತ್ತೆ. ಇದ್ರ ಜೊತೆಗೆ ಈಗ ಮುಂದೊಂದು ವಾರ ಕಂಪ್ಲೀಟ್ ಲಾಕ್​ಡೌನ್ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ನಾಳೆ ಸಿಎಂ ಅಂತಿಮ ನಿರ್ಧಾರ ತೆಗೆದುಕೊಳ್ತಾರೆ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply